ಮಲಪ್ಪುರಂ: ನಿಲಂಬೂರ್ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಆರ್ಯಾಡನ್ ಶೌಕತ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಯುಡಿಎಫ್ ಪರವಾಗಿ ಶೌಕತ್ 11005 ಮತಗಳಿಂದ ಗೆದ್ದರು.
ಆರ್ಯಾಡನ್ ಶೌಕತ್ - 76,666 ಮತಗಳು, ಎಂ. ಸ್ವರಾಜ್ - 65,661 ಮತಗಳು, ಪಿ.ವಿ. ಅನ್ವರ್ - 19,593 ಮತಗಳು, ಮೋಹನ್ ಜಾರ್ಜ್ - 8,536 ಮತಗಳು ಲಭಿಸಿವೆ.
ಮುತೇಡಂ, ವಾಹಿಕಡವು, ಎಡಕ್ಕರ, ಪೋತುಕಲ್ಲು ಮತ್ತು ಚುಂಗತ್ತರ ಪಂಚಾಯತ್‍ಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿತು. ಡಿಸಿಸಿ ಅಧ್ಯಕ್ಷ ವಿ.ಎಸ್. ಜಾಯ್ ಅವರ ಪೋತುಕಲ್ಲು ಪಂಚಾಯತ್‍ನಲ್ಲಿ, ಸ್ವರಾಜ್ ಸ್ವಲ್ಪ ಸಮಯದವರೆಗೆ ಮುನ್ನಡೆ ಸಾಧಿಸಿದ್ದರೂ, ಕೊನೆಯಲ್ಲಿ, ಯುಡಿಎಫ್ ಸ್ಪಷ್ಟ ಬಹುಮತಗಳಿಸಿತು.
ಎಂ. ಸ್ವರಾಜ್ ಅವರ ಸ್ವಂತ ಪಂಚಾಯತ್ ಪೋತುಕಲ್ಲಲ್ಲಿ ಯುಡಿಎಫ್ 800 ಮತಗಳ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಎಲ್‍ಡಿಎಫ್ 506 ಮತಗಳ ಮುನ್ನಡೆ ಸಾಧಿಸಿತ್ತು. ಅಲ್ಲಿಯ ಗ್ರಾ.ಪಂಚಾಯತಿ ಎಲ್‍ಡಿಎಫ್ ಆಡಳಿತದಲ್ಲಿದೆ. ವಾಹಿಕಡವದಲ್ಲಿ ಮಾತ್ರ ಯುಡಿಎಫ್ ನಿರೀಕ್ಷಿತ ಮತಗಳನ್ನು ಪಡೆಯಲಿಲ್ಲ.




.jpg)
