ಮಲಪ್ಪುರಂ: 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 60 ವರ್ಷದ ವ್ಯಕ್ತಿಗೆ 145 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಮಲಪ್ಪುರಂನ ಅರೀಕೋಡ್ ಕಾವನೂರಿನ ಮೂಲದ ಪಲ್ಲಿಯಲಿತೋಡಿ ಕೃಷ್ಣನ್ (60) ಗೆ ಶಿಕ್ಷೆ ವಿಧಿಸಲಾಗಿದೆ.
ಮಂಜೇರಿ ವಿಶೇಷ ಪೋಕ್ಸೊ ನ್ಯಾಯಾಲಯವು ಈ ತೀರ್ಪು ನೀಡಿದೆ. ಜೈಲು ಶಿಕ್ಷೆಯ ಜೊತೆಗೆ, 8.77 ಲಕ್ಷ ರೂ. ದಂಡವನ್ನು ಪಾವತಿಸಬೇಕು. ದಂಡವನ್ನು ಸಂತ್ರಸ್ಥೆಯ ಕುಟುಂಬಕ್ಕೆ ಪಾವತಿಸಬೇಕು ಎಂದು ಸೂಚಿಸಲಾಗಿದೆ.
ಮಗುವಿಗೆ ಅಶ್ಲೀಲ ವೀಡಿಯೊವನ್ನು ತೋರಿಸಿ ಅತ್ಯಾಚಾರ ಮಾಡಲಾಗಿದೆ. ಆರೋಪಿ 2022 ರಿಂದ 2023 ರವರೆಗೆ ಒಂದು ವರ್ಷ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರಕರಣವನ್ನು ಮಲಪ್ಪುರಂ ಮಹಿಳಾ ಪೋಲೀಸ್ ಠಾಣೆ ತನಿಖೆ ನಡೆಸಿದೆ.




