ಪ್ರತಿ ತಿಂಗಳ ಬ್ಯಾಂಕ್ ರಜಾದಿನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಹಣಕಾಸಿನ ವ್ಯವಹಾರಗಳಿಗಾಗಿ ಬ್ಯಾಂಕ್‌ಗೆ ಹೋಗುವ ಮುನ್ನ ರಜಾದಿನಗಳ ಪಟ್ಟಿ ನೋಡಿಕೊಳ್ಳಿ. 2025ರ ಜೂನ್‌ನಲ್ಲಿ ಒಟ್ಟು 12 ಬ್ಯಾಂಕ್ ರಜಾದಿನಗಳಿವೆ. ಈ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದೆ.
ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳ ಜೊತೆಗೆ ಬಕ್ರೀದ್, ರಥಯಾತ್ರೆ ಮುಂತಾದ ಹಬ್ಬಗಳ ರಜೆಗಳು ಈ ತಿಂಗಳಲ್ಲಿವೆ.
ಜೂನ್‌ನ ರಜಾದಿನಗಳ ಪಟ್ಟಿ
ಜೂನ್ 1 ಭಾನುವಾರ
ಜೂನ್ 6 ಶುಕ್ರವಾರ ಬಕ್ರೀದ್ (ಕೇರಳ)
ಜೂನ್ 7 ಶನಿವಾರ ಬಕ್ರೀದ್ (ಅಗರ್ತಲ, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ಇಂಫಾಲ್, ಜೈಪುರ್, ಜಮ್ಮು, ಕಾನ್ಪುರ್, ಕೊಹಿಮ, ಕೊಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ್, ನ್ಯೂ ಡೆಲ್ಲಿ, ಪಣಜಿ, ರಾಂಚಿ, ಶಿಮ್ಲಾ, ಪಾಟ್ನಾ, ರಾಯ್‌ಪುರ್)
ಜೂನ್ 8 ಭಾನುವಾರ
ಜೂನ್ 11 ಬುಧವಾರ ರಾಜ ಸಂಕ್ರಾಂತಿ (ಐಜ್ವಾಲ್, ಭುವನೇಶ್ವರ್, ಗ್ಯಾಂಗ್ಟಕ್, ಇಂಫಾಲ್, ಶಿಮ್ಲಾ)
ಜೂನ್ 14 ಎರಡನೇ ಶನಿವಾರ
ಜೂನ್ 15 ಭಾನುವಾರ
ಜೂನ್ 22 ಭಾನುವಾರ
ಜೂನ್ 27 ಶುಕ್ರವಾರ ರಥಯಾತ್ರೆ (ಭುವನೇಶ್ವರ್, ಇಂಫಾಲ್)
ಜೂನ್ 28 ನಾಲ್ಕನೇ ಶನಿವಾರ
ಜೂನ್ 29 ಭಾನುವಾರ
ಜೂನ್ 30 ಸೋಮವಾರ ರೆಮ್ನ ನಿ (ಐಜ್ವಾಲ್)




