ಮಧ್ಯಾಹ್ನ 1.15ಕ್ಕೆ ವಿಮಾನ ಟೇಕ್ ಆಫ್ ಆದ ಕೂಡಲೇ ಜನವಸತಿ ಪ್ರದೇಶದಲ್ಲಿ ಪತನಗೊಂಡಿದಿದೆ.
242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಅಹಮದಾಬಾದ್ ಏರ್ಪೋರ್ಟ್ನಿಂದ ಟೇಕ್ ಆಫ್ ಆಗುವಾಗ ಈ ದುರಂತ ನಡೆದಿದೆ. ಏರ್ಪೋರ್ಟ್ ಸಮೀಪದ ಮೇಘಾನಿ ನಗರದಲ್ಲಿ ಪತನವಾಗಿದೆ. ಏರ್ ಇಂಡಿಯಾದ 171 ಬೊಯಿಂಗ್ 787 ವಿಮಾನ ಅಹಮದಾಬಾದ್ನಿಂದ ಲಂಡನ್‌ಗೆ ಹೊರಟಿತ್ತು. ಆದರೆ, ತಾಂತ್ರಿಕ ಕಾರಣಕ್ಕೆ ವಿಮಾನ ಪತನವಾಗಿದೆ. 128 ರಿಂದ 140 ಜನ ಸದ್ಯಕ್ಕೆ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಲಂಡನ್‌ಗೆ ಹೊರಟಿದ್ದ ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, 7 ಪೋರ್ಚುಗೀಸ್ ಮತ್ತು 1 ಕೆನಡಾದ ಪ್ರಜೆಗಳು ಇದ್ದರು ಎಂದು ಏರ್ ಇಂಡಿಯಾ ತಿಳಿಸಿದೆ. ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದಲ್ಲಿ ಒಟ್ಟು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿ 242 ಜನರಿದ್ದರು.
ಕಾರುಗಳು ಸುಟ್ಟು ಭಸ್ಮ
ಇನ್ನು ವಿಮಾನ ಪತನಗೊಳ್ಳುತ್ತಿದ್ದಂತೆ ಹಾಸ್ಟೆಲ್ ಪಕ್ಕದಲ್ಲಿ ನಿಲ್ಲಿಸಿದ್ದ ಕೆಲ ಕಾರುಗಳು ಸುಟ್ಟು ಕರಕಲಾಗಿದೆ, ಜೊತೆಗೆ ದ್ವಿಚಕ್ರ ವಾಹನಗಳು ಸುಟ್ಟು ಬೂದಿಯಾಗಿದ್ದು ಅಗ್ನಿ ಶಾಮಕ ತಂಡ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.

