ಪೆರ್ಲ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಯೋಗ ತರಬೇತಿ ಕಾರ್ಯಕ್ರಮ ಜೂ. 15ರಿಂದ 21ರ ವರೆಗೆ ಪೆರ್ಲದ ಶ್ರೀ ಭಾರತೀಸದನದಲ್ಲಿ ಜರುಗಲಿರುವುದು. ಬೆಳಗ್ಗೆ 5.30ರಿಂದ 7ರ ವರೆಗೆ ಯೋಗತರಬೇತಿ ನಡೆಯಲಿರುವುದು. ಪಳ್ಳತ್ತಡ್ಕದ ಸಾಂದೀಪನಿ ಯೋಗ ಸೇವಾಲಯ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಯೋಗಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ಸೀತಾರಾಮ ಮುಂಗಿಲ ಹಾಗೂ ಮಲ್ಲೇಶ್ ಮಯಿಪ್ಪಾಡಿ ತರಬೇತಿ ನೀಡುವರು. ಮಂಡಿ, ಸೊಂಟ, ತಲೆನೋವು, ಖಿನ್ನತೆ, ಮಾನಸಿಕ ಒತ್ತಡ, ಎಸಿಡಿಟಿ, ಮೈಗ್ರೇನ್ ಮುಂತದ ಕಾಯಿಲೆಗಳ ನಿವಾರಣೆಗಾಗಿ ಯೋಗ ಕಲಿಕೆ ಸಹಕರಿಯಾಗಿರುವುದಾಗಿ ಯೋಗಾಚಾರ್ಯ ಪುಂಡೀಕಾಕ್ಷ ತಿಳಿಸಿದ್ದಾರೆ.






