ನವದೆಹಲಿ : ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನಾ ಪಡೆ ನಡೆಸಿದ ಅಪರೇಷನ್ ಸಿಂಧೂರದ ನಂತರ ದೇಶಾದ್ಯಂತ ಅಕ್ರಮ ವಲಸಿಗರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಇದುವರೆಗೂ 2,000 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡಿಪಾರು ಮಾಡಲಾಗಿದೆ.
ಇನ್ನು ಭಾರತದ ಕಟ್ಟು ನಿಟ್ಟಿನ ಕ್ರಮಗಳನ್ನು ಕಂಡು ಆತಂಕಗೊಂಡು ತಾವಾಗಿಯೇ ದೇಶ ಬಿಟ್ಟು ಬಾಂಗ್ಲಾದೇಶಕ್ಕೆ ಹೊರಟಿರುವ ವಲಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ ಎನ್ನಲಾಗಿದೆ.ಭಾರತ ಈಶಾನ್ಯ ರಾಜ್ಯಗಳಾದ
ತ್ರಿಪುರ, ಮೇಘಾಲಯ & ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ದೇಶದಿಂದ ಹೊರದಬ್ಬಲಾಗಿದೆ.
ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಈ ಅಕ್ರಮ ವಲಸಿಗರನ್ನು ವಿಮಾನಗಳಲ್ಲಿ ಬಾಂಗ್ಲಾ ಗಡಿಗಳಿಗೆ ಸಾಗಿಸಲಾಗುತ್ತಿದೆ.ಆ ಬಳಿಕ ಗಡಿಯುದ್ದಕ್ಕೂ ತಾತ್ಕಾಲಿಕ ಶಿಬಿರಗಳಲ್ಲಿ ಈ ವಲಸಿಗರನ್ನು ಇರಿಸಿ ಹಸ್ತಾಂತರಿಸಲಾಗುತ್ತಿದೆ.ಆದ್ರೆ ಬಾಂಗ್ಲಾದೇಶ ಭಾರತದ ಈ ಕ್ರಮವನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದು, ಭಾರತ ಡೋಂಟ್ ಕೇರ್ ಎಂಬಂತೆ ತನ್ನ ಕಾರ್ಯಾಚರಣೆ ಮುಂದುವರೆಸಿದೆ.

