ಕಾಸರಗೋಡು: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್(ಕಚುಸಾಪ)ವತಿಯಿಂದ ಅಂತಾರಾಜ್ಯ ಚುಟುಕು ಸಾಹಿತ್ಯ 5ನೇ ಸಮ್ಮೇಳನ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ಜೂ. 29ರಂದು ಜರುಗಲಿದೆ.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಟಾನ(ರಿ) ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ನೇತೃತ್ವದಲ್ಲಿ ಕಾರ್ಯಖ್ರಮ ಜರುಗಲಿದೆ. ನಾಡಿನ ಹಿರಿಯ ಚಿಂತಕ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಸಮ್ಮೇಳನ ಸರ್ವಾಧ್ಯಕ್ಷರಾಗಿರುವರು. ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಮ್ಮೇಳನಕ್ಕೆ ಚಾಲನೆ ನೀಡುವರು. ಉಡುಪಿಯ ಜ್ಯೋತಿಷ್ಯ ಪಂಡಿತ ವಿದ್ವಾನ್ ರಘುಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ ಚುಟುಕು ಪುಸ್ತಕ ಲೋಕಾರ್ಪಣೆಗೈಯುವರು. ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾಧ್ಯಕ್ಷರಾದ ಪೆÇ್ರ.ಜಿ.ಯು.ನಾಯಕ ಪಾಲ್ಗೊಳ್ಳುವರು.
ಈ ಸಂದರ್ಭ ಬಾಲಕ ಅವನೀಶ ನೀಲಗುಂದ ಅವರಿಂದ ಮಯೂರ ವರ್ಮ ಏಕಪಾತ್ರ ಅಭಿನಯ, ಡಾ.ಗಂಗಯ್ಯ ಕುಲಕರ್ಣಿ, ರೇಖಾ ಸುದೇಶ ರಾವ್ ನಿರೂಪಣೆ ಮಾಡುವರು. ನಂತರ 11-30 ಶಿರಸಿಯ ಯಕ್ಷಗಾನ ತಜ್ಞ ಗಣಪತಿ ಭಟ್ಟ ವರ್ಗಾಸರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಟಿ, ಡಾ.ವಸಂತ ನಾಯಕ ಆಶಯ ಭಾಷಣ, ಮೈಸೂರಿನ ಎನ್.ವಿ.ರಮೇಶ್ ,ಲತಾ ಮೋಹನ. ಹಾಗೂ ಗದುಗಿನ ವೀರನಗೌಡ ಮರಿಗೌಡ ಉಪನ್ಯಾಸ ನೀಡುವರು.ಹೊಸಪೇಟೆಯ ಎಲ್. ಹಾಲ್ಯಾ ನಾಯಕ ನಿರೂಪಿಸುವರು, ಮಧ್ಯಾಹ್ನ ಸಮಾರೋಪ ಹಾಗೂ ಕವಿಗೋಷ್ಟಿ ಡಾ. ಸುರೇಶ ನೆಗಲಗುಳಿ ಅಧ್ಯಕ್ಷತೆಯಲ್ಲಿ ಡಾ.ಕೆ.ಗೋವಿಂದ ಭಟ್ಟ ಆಶಯನುಡಿ, ಹಾವೇರಿಯ ಶೇಖರಗೌಡ ಪಾಟೀಲ ನಿರ್ಣಯ ಮಂಡನೆ ಮಾಡುವರು, ಪುತ್ತೂರು ವಿದ್ಯಾ ಬೇಕಲ್, ಡಾ.ರಮೇಶ ಅಂಬಿಗೇರ ನಿರೂಪಿಸುವರು ನಾಡಿನ ಇಪ್ಪತ್ತು ಜನ ಕವಿಗಳು ಕವನ ವಾಚನ ಮಾಡುವರು. ಕಾಸರಗೋಡು ಗಡಿನಾಡ ಸಾಂಸ್ಕೃತಿಕ ಸಂಘಟನೆಯ ಡಾ.ವಾಣಿಶ್ರೀ ಹಾಗೂ ತಂಡದಿಂದ ನೃತ್ಯ ಸಂಗೀತ ವೈಭವ, ನಂತರ ವಾದಿರಾಜ ಕಲ್ಲೂರಾಯ ರ ನೇತೃತ್ವದಲ್ಲಿ ಹರಿಸರ್ವೋತ್ತಮ ಯಕ್ಷ ತಾಳಮದ್ದಳೆ ಕಾರ್ಯಕ್ರಮ ಎಂದು ಸಿರಿಬಾಗಿಲು ಪ್ರತಿಷ್ಠಾನವು ಪ್ರಕಟನೆ ತಿಳಿಸಿದೆ.




