ನವದೆಹಲಿ: ಸಂಘರ್ಷ ಪೀಡಿತ ಇರಾನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ಮುಂದುವರಿದಿದ್ದು, ಬುಧವಾರ 296 ಮಂದಿ ಇಲ್ಲಿಗೆ ಬಂದಿಳಿದರು.
ಭಾರತೀಯರ ಜತೆ ನೇಪಾಳದ ನಾಲ್ವರು ಪ್ರಜೆಗಳನ್ನೂ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತವು 'ಆಪರೇಷನ್ ಸಿಂಧು' ಅಡಿಯಲ್ಲಿ ಇರಾನ್‌ನಿಂದ ಇದುವರೆಗೆ ಒಟ್ಟು 3,154 ಪ್ರಜೆಗಳನ್ನು ಕರೆತಂದಿದೆ.
'ಇರಾನ್‌ನ ಮಶಾದ್‌ನಿಂದ ಹೊರಟ ವಿಶೇಷ ವಿಮಾನ ಬುಧವಾರ ಸಂಜೆ 4.30ಕ್ಕೆ ನವದೆಹಲಿಗೆ ತಲುಪಿತು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಭಾರತವು ಮಂಗಳವಾರ ಇರಾನ್ ಮತ್ತು ಇಸ್ರೇಲ್‌ನಿಂದ 1,100 ಮಂದಿಯನ್ನು ಕರೆತಂದಿತ್ತು.




