ಬದಿಯಡ್ಕ: ವಿಶ್ವ ಪರಿಸರ ದಿನದಂದು ಬಿತ್ತಿದ ಭತ್ತದ ಕೃಷಿಯ 'ಕಂಡಕೋರಿ' (ನೇಜಿನೆಡುವ ಸಂಭ್ರಮ) ಜೂನ್ 29 ರಂದು ಭಾನುವಾರ ನೀರ್ಚಾಲು ಬನವಾಸಿಯಲ್ಲಿ ನಡೆಯಲಿದೆ.
ಅಂದು ಭತ್ತ ಬೇಸಾಯದ ಮಹತ್ವದ ಬಗ್ಗೆ ಪದ್ಮಶ್ರೀ ಬೆಳೇರಿ ಸತ್ಯನಾರಾಯಣ ಮಾತನಾಡಲಿದ್ದಾರೆ. ಭತ್ತ ಬೇಸಾಯದ ನುರಿತ ಹಿರಿಯ ಕಲಾವಿದರು 'ಓ ಬೇಲೆ' ಹಾಡಿನೊಂದಿಗೆ ನೇಜಿನೆಡುವರು. ಸ್ಥಳೀಯ ಶಾಲಾ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸುವರು.
ಬೆಳಗ್ಗೆ ಮಕ್ಕಳಿಗಾಗಿ ಹೊಸಗದ್ದೆಯಲ್ಲಿ ಜನಪದ ಕ್ರೀಡೆಗಳನ್ನು ಆಯೋಜಿಸಲಾಗುವುದು. ಕೃಷಿ ಸಂಬಂಧಿ ಹಾಗೂ ಪರಿಸರ ಪ್ರೀತಿಯನ್ನು ಉದ್ದೀಪನಗೊಳಿಸುವ ಲಘುಸ್ಪರ್ಧೆಗಳನ್ನು ಆಸಕ್ತರಿಗಾಗಿ ನಡೆಸಲಾಗುವುದು. ಭತ್ತಕೃಷಿಗೆ ಸಂಬಂಧಿಸಿದ ಪರಂಪರಾಗತ ಉಪಕರಣಗಳನ್ನು ಹಾಗೂ ಕೃಷಿ ಸಂಬಂಧಿ ಜನಪದ ಹಾಡುಗಳನ್ನು ಯುವತಲೆಮಾರಿಗೆ ಪರಿಚಯಿಸಲಾಗುವುದು ಎಂದು ಬನವಾಸಿಯ ಡಾ.ರತ್ನಾಕರ ಮಲ್ಲಮೂಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




