ತಿರುವನಂತಪುರಂ: ಕೇರಳದಲ್ಲಿ ಶಾಲಾ ತರಗತಿ ಈ ಹಿಂದೆ ನಿಗದಿಪಡಿಸಿದಂತೆ ಜೂ. 2ರಂದೇ ಆರಂಭಗೊಳ್ಳಲಿರುವುದಾಗಿ ಶಿಕ್ಷಣ ಖಾತೆ ಸಚಿವ ಶಿವನ್‍ಕುಟ್ಟಿ ತಿಳಿಸಿದ್ದಾರೆ. ಜೂ. 1ರಂದು ಹವಾಮಾನದಲ್ಲಿನ ಬದಲಾವಣೆಗೆ ಹೊಂದಿಕೊಂಡು ಶಾಲಾತರಗತಿ ಪುನರಾರಂಭಗೊಳಿಸಲು ಬದಲಾಣೆಗಳಿದ್ದಲ್ಲಿ, ಸಿಎಂ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯಾದ್ಯಂತ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾತರಗತಿ ಪೂರ್ವನಿಗದಿತ ಜೂ. 2ರಂದು ಪುನಾರಂಭಗೊಳ್ಳುವ ಬಗ್ಗೆ ಹೆತ್ತವರಲ್ಲಿ ಉಂಟಾಘಿದ್ದ ಗೊಂದಲಕ್ಕೆ ಈ ಮೂಲಕ ತೆರೆಬಿದ್ದಿದೆ.
ಈ ವರ್ಷ ಒಟ್ಟು 205 ಶೈಕ್ಷಣಿಕ ತರಗತಿ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿ ದಿನ ಅರ್ಧ ತಾಸು ಕಾಲ ಹೆಚ್ಚಿನ ತರಗತಿ ನಡೆಯಲಿದ್ದು, ಬೆಳಗ್ಗೆ 10ಕ್ಕೆ ಬದಲು 9.45ಕ್ಕೆ ಶಾಲೆ ಆರಂಭಗೊಂಡು, ಸಂಜೆ 4ರ ಬದಲು 4.15ರ ವರೆಗೆ ತರಗತಿ ನಡೆಯಲಿರುವುದು. ಎಲ್‍ಪಿ ವಿಭಾಗಕ್ಕೆ ವರ್ಷದಲ್ಲಿ 800ತಾಸು, ಯುಪಿ ವಿಭಾಗಕ್ಕೆ 1ಸಾವಿರ ತಾಸು ಹಾಗೂ ಹೈಸ್ಕೂಲ್ ವಿಭಾಗಕ್ಕೆ 1200ತಾಸುಗಳ ಅಧ್ಯಯನ ಕಾಲಾವಬಧಿ ನಿಗದಿಪಡಿಸಲಾಗಿದೆ.






