ಕೀವ್ : ಉಕ್ರೇನ್‌ನ ಆರು ಪ್ರಾಂತ್ಯಗಳ ಮೇಲೆ ರಷ್ಯಾದಿಂದ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆದಿದೆ ಎಂದು ಉಕ್ರೇನ್‌ನ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸುಮಾರು ನಾಲ್ಕು ಗಂಟೆಗೂ ಹೆಚ್ಚು ಹೊತ್ತು ನಡೆದ ದಾಳಿಯಲ್ಲಿ ಕೀವ್‌ನಲ್ಲಿ ತುರ್ತು ಸ್ಪಂದನಾ ತಂಡದ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ರಷ್ಯಾ ಸೇನೆಯು 407 ಡ್ರೋನ್‌ಗಳು ಮತ್ತು 44 ಕ್ಷಿಪಣಿಗಳನ್ನು ಹಾರಿಸಿದೆ. ಅದರಲ್ಲಿ ಸುಮಾರು 200 ಡ್ರೋನ್‌ಗಳು ಹಾಗೂ 30 ಕ್ಷಿಪಣಿಗಳನ್ನು ಉಕ್ರೇನ್ ಪಡೆಗಳು ಹೊಡೆದುರುಳಿಸಿವೆ ಎಂದು ಸೇನೆಯ ವಕ್ತಾರ ಯೂರಿ ಇನಾತ್ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ಮಾಸ್ಕೊ ಸೇರಿದಂತೆ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಉಕ್ರೇನ್ ಸೇನೆ ಶುಕ್ರವಾರ ಬೆಳಿಗ್ಗೆ ಡ್ರೋನ್ ದಾಳಿ ನಡೆಸಿದೆ.
'ಮಾಸ್ಕೊ ಕಡೆ ಬರುತ್ತಿದ್ದ 10 ಡ್ರೋನ್‌ಗಳು ಒಳಗೊಂಡಂತೆ ಒಟ್ಟು 174 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ' ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

