HEALTH TIPS

ಮ್ಯೂಚುವಲ್ ಫಂಡ್ ಮಾರುಕಟ್ಟೆಗೆ ಜಿಯೋ-ಬ್ಲ್ಯಾಕ್‌ರಾಕ್ ಪ್ರವೇಶ: 3 ಸಾಲದ ಸ್ಕೀಮ್‌ಗಳು ಲಾಂಚ್!

ಜಿಯೋ ಬ್ಲ್ಯಾಕ್‌ರಾಕ್ ಮ್ಯೂಚುವಲ್ ಫಂಡ್ : ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿ. (ಜೆಎಫ್‌ಎಸ್‌ಎಲ್) ಮತ್ತು ಬ್ಲ್ಯಾಕ್‌ರಾಕ್‌ನ 50:50 ಜಂಟಿ ಉದ್ಯಮವಾದ ಜಿಯೋಬ್ಲ್ಯಾಕ್‌ರಾಕ್ ಅಸೆಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿ.ಗೆ ಭಾರತದಲ್ಲಿ ಮ್ಯೂಚುಯಲ್ ಫಂಡ್ ವ್ಯವಹಾರವನ್ನು ಶುರುಮಾಡಲು ಸೆಕ್ಯುರಿಟೀಸ್ ಆಂಡ್‌ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (ಸೆಬಿ) ಒಪ್ಪಿಗೆಯನ್ನು ಕೂಡ ಪಡೆದುಕೊಂಡಿತ್ತು.

ಹೌದು,ಜಿಯೋ ಹಾಗೂ ಅಮೆರಿಕಾದ ಖ್ಯಾತ ಹೂಡಿಕೆ ಸಂಸ್ಥೆ ಬ್ಲ್ಯಾಕ್‌ರಾಕ್ ಜಂಟಿಯಾಗಿ ಮ್ಯೂಚುವಲ್ ಫಂಡ್ ಉದ್ಯಮಕ್ಕೆ ಆರಂಭಿಸುವುದಾಗಿ ಈ ಹಿಂದೆ ಹೇಳಿತ್ತು ಇದಕ್ಕಾಗಿ ಮಾರುಕಟ್ಟೆ ನಿಯಂತ್ರಕ ಸೆಬಿ ಅನುಮತಿಯನ್ನು ಕೂಡ ಪಡೆದುಕೊಂಡಿತ್ತು. ಇದೀಗ ಸಾಲದ ಹೊಸ ಮೂರು ಮ್ಯೂಚುವಲ್‌ ಫಂಡ್ ಶುರು ಮಾಡಿ ಮ್ಯೂಚುವಲ್ ಫಂಡ್ ಉದ್ಯಮಕ್ಕೆ ಪರಿಚಯವನ್ನು ಮಾಡಿಸಿದೆ. ಇದು ಮುಕ್ತ ಸಾಲ ಯೋಜನೆಗಳನ್ನು ತನ್ನ ಮ್ಯೂಚುವಲ್ ಫಂಡ್ ಮೂಲಕ ಮಾಡಿದೆ.

ಜಿಯೋ ಬ್ಲ್ಯಾಕ್‌ರಾಕ್ ಮ್ಯೂಚುವಲ್ ಫಂಡ್ ಪರಿಚಯಿಸಿದ ಮೂರು ಸಾಲದ ಯೋಜನೆಗಳೆಂದರೆ, ಜಿಯೋಬ್ಲಾಕ್‌ರಾಕ್ ಲಿಕ್ವಿಡ್ ಫಂಡ್, ಜಿಯೋಬ್ಲಾಕ್‌ರಾಕ್ ಮನಿ ಮಾರ್ಕೆಟ್ ಫಂಡ್ ಮತ್ತು ಜಿಯೋಬ್ಲಾಕ್‌ರಾಕ್ ಓವರ್‌ನೈಟ್ ಫಂಡ್. ಈ ಮೂರು ನಿಧಿಗಳಿಗೆ ಹೊಸ ನಿಧಿ ಕೊಡುಗೆ (NFO) ಇಂದಿನಿಂದ ಆರಂಭವಾಗಿ ಜುಲೈ 2 ರವರೆಗೆ ನೋಂದಣಿಗೆ ತರೆದಿರುತ್ತದೆ.

ಜಿಯೋಬ್ಲಾಕ್‌ರಾಕ್ ಲಿಕ್ವಿಡ್ ಫಂಡ್ (JioBlackRock Liquid Fund)

ಜಿಯೋ ಬ್ಲ್ಯಾಕ್‌ರಾಕ್ ಲಿಕ್ವಿಡ್ ಮ್ಯೂಚುವಲ್ ಫಂಡ್ ಕಡಿಮೆ ಅವಧಿಯವರೆಗೂ ಹೂಡಿಕೆಗಳನ್ನು ಮಾಡಲು ಬಯಸುವವರಿಗೆ ಈ ಯೋಜನೆ ಸೂಕ್ರವಾಗಿದೆ. ಈ ಯೋಜನೆಯ ಹೂಡಿಕೆದಾದರಿಗೆ ತ್ವರಿತವಾಗಿ ಹಣದ ಅಗತ್ಯಗಳನ್ನು ಪೂರೈಸಲುನ ನೆರವು ಆಗುತ್ತದೆ. ಈ ನಿಧಿಯ ಸಾಂಪ್ರದಾಯಿಕ ಉಳಿತಾಯ ಖಾತೆಗಳಿಗೆ ಹೋಲಿಸಿದರೆ ಉತ್ತಮ ಆದಾಯವನ್ನು ನೀಡುವ ಸಾಧ್ಯತೆ ಇದೆ.

ಲಿಕ್ವಿಡ್ ಫಂಡ್ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತವು 500 ಆಗಿದೆ. ಜಿಯೋಬ್ಲಾಕ್‌ರಾಕ್ ಲಿಕ್ವಿಡ್ ಫಂಡ್ ಶ್ರೇಣೀಕೃತ ನಿರ್ಗಮನ ಶುಲ್ಕವನ್ನು ಹೊಂದಿದೆ. ಹೂಡಿಕೆ ಮಾಡಿದ ದಿನಾಂಕದಿಂದ ಮೊದಲ ದಿನ ಶೇ. 0.0070 ರಷ್ಟು ನಿರ್ಗಮನ ಶುಲ್ಕವಿದ್ದು, ಏಳನೇ ದಿನದಿಂದ ಈ ಶುಲ್ಕವು ಶೂನ್ಯಕ್ಕೆ ಇಳಿಯುತ್ತದೆ. ಹೂಡಿಕೆದಾರರು ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯ. ನಿಯಮಿತ ಆದಾಯವನ್ನು ಬಯಸುವ ಹೂಡಿಕೆದಾರರಿಗಾಗಿ ಜಿಯೋಬ್ಲಾಕ್‌ರಾಕ್ ಲಿಕ್ವಿಡ್ ಫಂಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಲ್ಲಿ ನೀವು 91 ದಿನಗಳವರೆಗೂ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು.

ಮನಿ ಮಾರ್ಕೆಟ್ ಫಂಡ್ (Money Market Fund)

ಮನಿ ಮಾರ್ಕೆಟ್ ಫಂಡ್ ಯೋಜನೆಯು ಒಂದು ವರ್ಷದವರೆಗೆ ಹಣವನ್ನು ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲಕರವಾದ ನಿಧಿಯಾಗಿದೆ. ನಿರಂತರ ಆದಾಯವನ್ನು ಗಳಿಸುವ ಗುರಿಯನ್ನು ಈ ಮ್ಯೂಚುವಲ್ ಫಂಡ್ ಹೊಂದಿದೆ. ರವಾದ ಆದಾಯವನ್ನು ಒಯಸುವವರಿಗೂ ಉತ್ತಮ ಆಯ್ಕೆ ಎಂದೇ ಹೇಳಬಹುದು. ನೀವು ಈ ನಿಧಿಯಲ್ಲಿ ಕನಿಷ್ಠ 500 ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಇದು ಹೂಡಿಕೆದಾರರು ಯಾವುದೇ ನಿರ್ಗಮನ ಶುಲ್ಕವನ್ನು ಪಾವತಿಸುಬೇಕಿಲ್ಲ.ಇದು ಕಡಿಮೆ ಅಪಾಯವನ್ನು ಹೊಂದಿರುವ ಹೂಡಿಕೆಯಾಗಿದೆ.

ಭಾರತದಲ್ಲಿ ಮನಿ ಮಾರ್ಕೆಟ್ ಫಂಡ್‌ಗಳು ಸಾಮಾನ್ಯವಾಗಿ ಕಡಿಮೆ ಅವಧಿಯ ಹೂಡಿಕೆಗಳಾಗಿವೆ. ಇವುಗಳನ್ನು ಸುರಕ್ಷಿತವೆಂದು ಹೇಳಲಾಗುತ್ತದೆ. ಜಿಯೋಬ್ಲಾಕ್‌ರಾಕ್ ಮನಿ ಮಾರ್ಕೆಟ್ ಫಂಡ್ ಸಹ ಇದೇ ರೀತಿಯ ಹೂಡಿಕೆಯಾಗಿದೆ.

ಓವರ್‌ನೈಟ್ ಫಂಡ್ (Overnight Fund)

ಜಿಯೋಬ್ಲಾಕ್‌ರಾಕ್ ಓವರ್‌ನೈಟ್ ಫಂಡ್ ಹೂಡಿಕೆದಾರರಿಗೆ ರಾತ್ರೋರಾತ್ರಿ ಹಣಕಾಸು ಮಾರುಕಟ್ಟೆಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ. ಇದು ಕಡಿಮೆ ಅವಧಿಯ ಹೂಡಿಕೆಯಾಗಿದ್ದು, ಹೂಡಿಕೆದಾರರಿಗೆ ಅನುಕೂಲಕರವಾಗಿದೆ. ಈ ಫಂಡ್‌ನಿಂದ ಬರುವ ಆದಾಯವು ಉಳಿತಾಯ ಖಾತೆಗಳಿಗಿಂತ ತುಸು ಹೆಚ್ಚಗಿ ಇರಬಹುದು.ಇದು ಅತಿ ಕಡಿಮೆ ಅವಧಿಗೆ ಒಂದೇ ರಾತ್ರಿಗೆ) ಹಣ ಹೂಡಿಕೆ ಮಾಡುವ ಲಿಕ್ವಿಡ್ ಫಂಡ್ ಆಗಿದೆ. ಅತಿ ಕಡಿಮೆ ಅವಧಿಯ ಸಾಲ ಮತ್ತು ಹಣದ ಮಾರುಕಟ್ಟೆ ಸಾಧನಗಳ ಮೂಲಕ ಆದಾಯವನ್ನು ಗಳಿಸಲು ಪ್ರಯತ್ನವನ್ನು ಮಾಡುತ್ತಿದೆ. ಈ ನಿಧಿಯಲ್ಲಿ ಅಪಾಯದ ಸಾಧ್ಯತೆಗಳು ಬಹುತೇಕ ಕಡಿಮೆ.

ಈ ಯೋಜನೆಯು ಯಾವುದೇ ನಿರ್ಗಮನ ಶುಲ್ಕವನ್ನು ವಿಧಿಸದ ಕಾರಣ, ಹೂಡಿಕೆದಾರರು ಯಾವುದೇ ಸಮಯದಲ್ಲಿ ಹಣವನ್ನು ಹಿಂಪಡೆಯಬಹುದು. ಆದರೆ, ಹೂಡಿಕೆಯು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ಹೂಡಿಕೆ ಮಾಡುವ ಮೊದಲು, ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಬೇಕು. ಈ ನಿಧಿಯಲ್ಲಿ ನೀವು ಹೂಡಿಕೆ ಮಾಡಲು ಕನಿಷ್ಠ ಚಂದಾದಾರಿಕೆ 500 ಆಗಿರುವುದರಿಂದ ಸರಣ್ಣ ಹೂಡಿಕೆದರಿಗೆ ಅನುಕೂಲವಾಗುತ್ತದೆ.

ಹೂಡಿಕೆದಾರರು, ಹೊಸ ಹಣದ ಕೊಡುಗೆ (New Fund Offer - NFO) ಅವಧಿಯಲ್ಲಿ, ಜಿಯೋಬ್ಲ್ಯಾಕ್‌ರಾಕ್‌ನ ನಿಧಿಯ ವೇದಿಕೆ ಅಥವಾ ಭಾಗವಹಿಸುವ ವಿತರಕರ ಮೂಲಕ ಯೋಜನೆಗಳಿಗೆ ಚಂದಾದಾರರಾಗಬಹುದು.ಭಾರತದ ಮಾರುಕಟ್ಟೆಯಲ್ಲಿ ಜಿಯೋಬ್ಲ್ಯಾಕ್‌ರಾಕ್‌ನ ಪ್ರವೇಶವು ಹೂಡಿಕೆದಾರರಿಗೆ ಹೊಸ ಸಂಚಲವನ್ನು ಸೃಷ್ಟಿ ಮಾಡಬಹುದು.

ಯಾವುದಲ್ಲಿ ಹಣವನ್ನು ಹೂಡಿಕೆ ಮಾಡಲು ಮೊದಲು, ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕಕೊಳ್ಳಬೇಕು.ಗೊಂದಲವಿದ್ದರೆ ಸಂಬಂಧಪಟ್ಟರನ್ನು ಭೇಟಿ ಮಾಡಿ ಮಾಹಿತಿ ಮಡೆದುಕೊಂಡು ಮುಂದಿನ ಹೆಜ್ಜೆಯನ್ನು ಇಡುವುದು ಮುಖ್ಯ.. ಎಚ್ಚರಿಕೆಯಿಮದ ಎಲ್ಲಾ ಅಂಶಗಳನ್ನು ಗಮನಿಸಿ ನೀವು ಹೂಡಿಕೆ ಮಾಡುವ ನಿರ್ಧಾರವನ್ನು ಮಾಡಿ.

Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries