ಕೀವ್: ಉಕ್ರೇನ್ ಮೇಲೆ 479 ಡ್ರೋನ್‌ಗಳಿಂದ ರಷ್ಯಾ ದಾಳಿ ನಡೆಸಿದೆ ಎಂದು ಉಕ್ರೇನ್ ವಾಯುಪಡೆಯು ಸೋಮವಾರ ಹೇಳಿದೆ.
ವಿವಿಧ ರೀತಿಯ 20 ಕ್ಷಿಪಣಿಗಳಿಂದಲೂ ದೇಶದ ವಿವಿಧೆಡೆ ದಾಳಿ ನಡೆಸಲಾಗಿದೆ. ದೇಶದ ಕೇಂದ್ರ ಮತ್ತು ಪಶ್ಚಿಮದ ಪ್ರದೇಶಗಳನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅದು ತಿಳಿಸಿದೆ.
ದೇಶದ ವಾಯು ರಕ್ಷಣಾ ವ್ಯವಸ್ಥೆಯು 277 ಡ್ರೋನ್‌ಗಳು ಮತ್ತು 19 ಕ್ಷಿಪಣಿಗಳನ್ನು ನಾಶ ಮಾಡಿದೆ. ರಷ್ಯಾದ 10 ಡ್ರೋನ್ ಅಥವಾ ಕ್ಷಿಪಣಿಗಳು ಮಾತ್ರ ತಮ್ಮ ಗುರಿಯನ್ನು ತಲುಪಿವೆ ಎಂದು ವಾಯುಪಡೆಯು ಹೇಳಿಕೆಯಲ್ಲಿ ತಿಳಿಸಿದೆ.
ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಮಾತ್ರ ದಾಳಿ ಮಾಡಲಾಗುತ್ತಿದೆ ಎಂದು ರಷ್ಯಾ ಪ್ರತಿಕ್ರಿಯೆ ನೀಡಿದೆ.




