HEALTH TIPS

75 ಕೋಟಿ ರೂಪಾಯಿಯ ಸಂಬಳ ತೊರೆದು ಸನ್ಯಾಸಿಯಾದ ರಿಲಯನ್ಸ್ ಉಪಾಧ್ಯಕ್ಷ ಪ್ರಕಾಶ್ ಶಾ!

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಆಪ್ತ ಸಹಾಯಕರಾಗಿದ್ದ ಪ್ರಕಾಶ್ ಶಾ, ತಮ್ಮ ಉನ್ನತ ಹುದ್ದೆ ಮತ್ತು 75 ಕೋಟಿ ರೂಪಾಯಿ ಸಂಬಳ ತ್ಯಜಿಸಿ ಸನ್ಯಾಸಿಯಾಗಿದ್ದಾರೆ.

ವ್ಯವಹಾರ ಕೌಶಲ್ಯ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾದ ಶಾ ಮತ್ತು ಅವರ ಪತ್ನಿ ನೈನ್ ಶಾ ಮಹಾವೀರ ಜಯಂತಿಯಂದು ದೀಕ್ಷೆ ತೆಗೆದುಕೊಳ್ಳುವ ಮೂಲಕ ಶಾಂತಿ ಮತ್ತು ಆಧ್ಯಾತ್ಮಿಕ ಜೀವನವನ್ನು ಸ್ವೀಕರಿಸಿದ್ದಾರೆ.

ಪ್ರಕಾಶ್ ಶಾ ಯಾರು?

ಪ್ರಕಾಶ್ ಷಾ ಅವರು ರಿಲಯನ್ಸ್‌ ನಲ್ಲಿ ಉಪಾಧ್ಯಕ್ಷರಾಗಿದ್ದರು. ಕಂಪೆನಿಯ ಪ್ರಮುಖ ನಿರ್ಧಾರಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು. ಯಶಸ್ವಿ ವೃತ್ತಿಜೀವನ ಮತ್ತು ಲೌಕಿಕ ಜೀವನವನ್ನು ತ್ಯಜಿಸುವ ಅವರ ಆಯ್ಕೆಯು ಅನೇಕರನ್ನು ಅಚ್ಚರಿಗೊಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅವರ ಫೋಟೋಗಳು, ಪ್ರಕಾಶ್ ಶಾ ಅವರು ಸರಳವಾದ ಬಿಳಿ ನಿಲುವಂಗಿಯನ್ನು ಧರಿಸಿ, ಕೆಲವೇ ವಸ್ತುಗಳೊಂದಿಗೆ ಬರಿಗಾಲಿನಲ್ಲಿ ನಡೆಯುವುದನ್ನು ತೋರಿಸುತ್ತವೆ.

ಪ್ರಕಾಶ್ ಶಾ ಅವರು ಬ್ರಹ್ಮಚರ್ಯದ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ. ಎಲ್ಲಾ ಭೌತಿಕ ಸವಲತ್ತುಗಳನ್ನು ತ್ಯಜಿಸಿದ್ದಾರೆ. ಈಗ, ಅವರು ಸರಳ ನಿರ್ಲಿಪ್ತ ಪರೋಪಕಾರದಲ್ಲಿ ತೊಡಗಿಕೊಳ್ಳುವ ಸೇವೆಯ ಜೀವನವನ್ನು ಅನುಸರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ವೃತ್ತಿಜೀವನದ ಉತ್ತುಂಗದಲ್ಲಿದ್ದ ಪ್ರಕಾಶ್ ಶಾ ಅವರು ಆಧ್ಯಾತ್ಮದೆಡೆಗೆ ವಾಲಿದ್ದು ಹೇಗೆ?

ಆಧ್ಯಾತ್ಮಿಕ ಜೀವನವನ್ನು ಸ್ವೀಕರಿಸುವ ಪ್ರಕಾಶ್ ಷಾ ಅವರ ನಿರ್ಧಾರವು ರಾತ್ರೋರಾತ್ರಿ ಸಂಭವಿಸಲಿಲ್ಲ. ಅವರಿಗೆ ಜೈನ ತತ್ವಶಾಸ್ತ್ರ ಮತ್ತು ಆಧ್ಯಾತ್ಮದಲ್ಲಿ ಹಲವು ವರ್ಷಗಳ ಕಾಲ ಆಳವಾದ ಆಸಕ್ತಿ ಇತ್ತು ಎಂದು ಅವರ ಆಪ್ತರು ಹೇಳುತ್ತಾರೆ. ಕಾಲಾನಂತರದಲ್ಲಿ, ಆಧ್ಯಾತ್ಮದೆಡೆಗಿನ ಅವರ ಒಲವು ಬಲವಾಯಿತು. ಆ ಮೂಲಕ ಅವರು ಕಷ್ಟಪಟ್ಟು ಗಳಿಸಿದ ಲೌಕಿಕ ಜೀವನದ ಸವಲತ್ತುಗಳನ್ನು ತ್ಯಜಿಸಿದರು ಎನ್ನಲಾಗಿದೆ.

ಈ ಮಹಾನ್ ಪರಿವರ್ತನೆಯ ಮೊದಲು, ಷಾ ಅವರ ವೃತ್ತಿಜೀವನವು ಉತ್ತಮವಾಗಿತ್ತು. ಅವರು ಕೆಮಿಕಲ್ ಎಂಜಿನಿಯರ್ ಆಗಿದ್ದು, ಐಐಟಿ ಬಾಂಬೆಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾರ್ಪೊರೇಟ್ ವಲಯದಲ್ಲಿ ಉನ್ನತ ಹುದ್ದೆಗಳ ಮೂಲಕ ವೃತ್ತಿ ಜೀವನದ ಉತ್ತುಂಗಕ್ಕೆ ಅವರು ತಲುಪಿದ್ದರು. ಈ ಸಮಯದಲ್ಲಿ ಪೆಟ್‌ಕೋಕ್ ಮಾರ್ಕೆಟಿಂಗ್ ಮತ್ತು ಜಾಮ್‌ನಗರ ಪೆಟ್‌ಕೋಕ್ ಅನಿಲೀಕರಣದಂತಹ ನಿರ್ಣಾಯಕ ಯೋಜನೆಗಳನ್ನು ನಿರ್ವಹಿಸಿದ್ದರು. ಈಗ ಅದೆಲ್ಲವನ್ನು ತೊರೆದು ಸನ್ಯಾಸಿಯಾಗಿ, ಸರಳತೆ ಮತ್ತು ಶಿಸ್ತಿನ ಮಾರ್ಗದಲ್ಲಿ ಸಾಗುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries