ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ 7 ದಿನಗಳ ಯುರೋಪ್ ಪ್ರವಾಸ ಭಾನುವಾರದಿಂದ ಪ್ರಾರಂಭವಾಗಿದೆ.
ಫ್ರಾನ್ಸ್‌ಗೆ ಮೊದಲು ಭೇಟಿ ನೀಡಿರುವ ಜೈಶಂಕರ್, ನಂತರ ಬ್ರಸೆಲ್ಸ್‌ನಲ್ಲಿ ಯುರೋಪ್ ಒಕ್ಕೂಟದ ಮಾಯಕರನ್ನು ಭೇಟಿಯಾಗಲಿದ್ದಾರೆ. ಬಳಿಕ ಬೆಲ್ಜಿಯಂಗೆ ತೆರಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಈ ಭೇಟಿಯ ವೇಳೆ ದ್ವಿಪಕ್ಷೀಯ ಸಂಬಂಧ ಸುಧಾರಣೆ ಹಾಗೂ ಭಯೋತ್ಪಾದನೆ ವಿರುದ್ಧ ಭಾರತ ಹೊಂದಿರುವ ಶೂನ್ಯ ಸಹಿಷ್ಣುತೆಯ ನಿಲುವನ್ನು ಜೈಶಂಕರ್ ಅವರು ಪುನರುಚ್ಚರಿಸುವ ನಿರೀಕ್ಷೆಯಿದೆ.




