ನವದೆಹಲಿ : ಗುಜರಾತ್ ವಿಮಾನ ದುರಂತಕ್ಕೆ ಏರ್ ಇಂಡಿಯಾ ಮುಖ್ಯಸ್ಥ ಚಂದ್ರಶೇಖರನ್ ಕ್ಷಮೆಯಾಚಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಲು ನನ್ನಲ್ಲಿ ಮಾತುಗಳೇ ಹೊರಡುತ್ತಿಲ್ಲ. ಇದೊಂದು ವಿಷಮ ಸನ್ನಿವೇಶವಾಗಿದೆ ಎಂದು ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಮಾನ ದುರಂತಕ್ಕೆ ಕಾರಣವೇನೆಂದು ತನಿಖೆಯ ಬಳಿಕ ತಿಳಿದುಬರಲಿದೆ. ಆರ್‌ಕ್ರಾಫ್ಟ್ ಆಕ್ಷಿಡೆಂಟ್ ಇನ್ವಿಸ್ಟಿಗೇಶನ್ ಬ್ಯೂರೋ ಈಗಾಗಲೇ ತನಿಖೆ ಪ್ರಾರಂಭಿಸಿದೆ. ಡಿಜಿಸಿಎ ಕೂಡ ತನಿಖೆಗೆ ಪ್ರತ್ಯೇಕವಾದ ಸಮಿತಿ ರಚಿಸಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ವಿಮಾನ ದುರಂತಕ್ಕೆ ಮಾನವ ದೋಷ, ಎಂಜಿನ್ ಸಮಸ್ಯೆ, ನಿರ್ವಹಣೆ ಕೊರತೆ ಎಲ್ಲವೂ ಕಾರಣವೆಂಬುದು ಕೇವಲ ಊಹಾಪೋಹಗಳಷ್ಟೇ. ಇದುವರೆಗೂ ಈ ಆರೋಪವನ್ನು ಧೃಡಪಡಿಸಲಾಗಿಲ್ಲ. ಎ 171 ವಿಮಾನವು ಇದುವರೆಗೂ ಅತ್ಯುತ್ತಮ ಹಿನ್ನೆಲೆಯ ದೋಷರಹಿತ ವಿಮಾನವೆಂದು ಹೆಸರಾಗಿದೆ. ಎಂಜಿನ್ ಗಳು ಹೊಸದಾಗಿದ್ದು, ಪೈಲೆಟ್ ಗಳು ಪರಿಣಿತರಾಗಿದ್ದರು. ಬ್ಲಾಕ್ ಬಾಕ್ಸ್ ಮತ್ತು ರೆಕಾರ್ಡರ್ ನಿಂದ ನಿಜವಾಗಿಯೂ ಅಪಘಾತದ ಕಾರಣವೇನೆಂದು ತಿಳಿದುಬರಲಿದೆ ಎಂದು ಚಂದ್ರಶೇಖರನ್ ಹೇಳಿದ್ದಾರೆ.




