HEALTH TIPS

ವಿಮಾನ ದುರಂತ: Air India ಸಹಭಾಗಿತ್ವ ಕಂಪನಿ ಕಚೇರಿಯಲ್ಲಿ ಪಾರ್ಟಿ! ನಾಲ್ವರ ವಜಾ

ಗುರುಗ್ರಾಮ: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ನಡೆದ ಕೆಲವೇ ದಿನಗಳಲ್ಲಿ ಏರ್ ಇಂಡಿಯಾದ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆ ನೀಡುವ ಎಐಎಸ್‌ಎಟಿಎಸ್ ಕಂಪನಿ ಕಚೇರಿಯಲ್ಲೇ ಪಾರ್ಟಿ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿದಾಡುತ್ತಿರುವಂತೆ ಎಐಎಸ್‌ಎಟಿಎಸ್ ಕಂಪನಿ ತಕ್ಷಣ ಕ್ರಮ ಕೈಗೊಂಡಿದೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಇಬ್ಬರು ಹಿರಿಯ ಉಪಾಧ್ಯಕ್ಷರು ಹಾಗೂ ತರಬೇತಿ ಮುಖ್ಯಸ್ಥರ ರಾಜೀನಾಮೆ ಪಡೆದಿದೆ. ಇದರ ಜೊತೆಗೆ, ಇತರ ಕೆಲವು ಉದ್ಯೋಗಿಗಳಿಗೆ ಕಂಪನಿ ಎಚ್ಚರಿಕೆ ನೀಡಿದೆ.

ಏರ್ ಇಂಡಿಯಾಗಳಿಗೆ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಗಳ ಪಾಲುದಾರ ಸಂಸ್ಥೆಯಾದ, ಸಿಂಗಪುರ ಮೂಲದ ಎಐಎಸ್‌ಎಟಿಎಸ್ ಕಂಪನಿಯು ಗುರುಗ್ರಾಮದ ಕಚೇರಿಯಲ್ಲಿ ಜೂನ್‌ 26ರಂದು ಒಂದು ಪಾರ್ಟಿ ಮಾಡಿದೆ. ಅದರಲ್ಲಿ ಇಡೀ ಕಚೇರಿಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜೂನ್‌ 12ರಂದು ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ, ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹ್ಮದಾಬಾದ್ ನ ಹೊರವಲಯದಲ್ಲಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದ ಮೇಲೆ ಅಪ್ಪಳಿಸಿತ್ತು. ಆ ದುರ್ಘಟನೆಯಲ್ಲಿ ಒಟ್ಟು 270ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

ಈ ದುರಂತದ ನೋವು ಇನ್ನೂ ಜೀವಂತವಾಗಿರುವಾಗಲೇ ಅಧಿಕಾರಿಗಳ ವರ್ತನೆಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಈ ದುರಂತದ ಸಂದರ್ಭದಲ್ಲಿ ಇಂತಹ ಆಚರಣೆ ಬೇಕಾ? ಈ ಸಮಯದಲ್ಲಿ ಈ ರೀತಿ ಆಚರಣೆ ಮಾಡುವುದು ಸರಿಯಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries