HEALTH TIPS

ಸತತ ಮೂರನೇ ಬಾರಿಗೆ ರೆಪೊ ದರವನ್ನು ಕಡಿತ? ಆರ್‌ಬಿಐ ಹೇಳೋದೇನು?

ನವದೆಹಲಿ: ಈ ವರ್ಷ ಆರ್‌ಬಿಐ (RBI) ಮೇಲಿಂದ ಮೇಲೆ ಗ್ರಾಹಕರಿಗೆ ಶುಭ ಸುದ್ದಿಯನ್ನು ನೀಡುತ್ತಲೇ ಇದೆ. ಇದೇ ವರ್ಷದಲ್ಲಿ ಎರಡು ಬಾರಿ ರೆಪೋ ದರವನ್ನು (Repo Rate) ಕಡಿಮೆ ಮಾಡಿ ಗ್ರಾಹಕರ ಹೊರೆ ಕಡಿಮೆ ಮಾಡಿದ್ದು, ಇದೀಗ ಹಣದುಬ್ಬರವು ಶೇಕಡಾ 4 ಕ್ಕಿಂತ ಕಡಿಮೆ ಇರುವುದರಿಂದ ಬೆಳವಣಿಗೆಯನ್ನು ಬೆಂಬಲಿಸಲು, ಜೂನ್ 4 ರಿಂದ 6 ರವರೆಗೆ ನಡೆಯಲಿರುವ ನೀತಿ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಪ್ರಮುಖ ನೀತಿ ದರವಾದ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಆರು ಸದಸ್ಯರ MPC ಮುಂಬರುವ ಸಭೆಯಲ್ಲಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ (bps) 5.75 ಪ್ರತಿಶತಕ್ಕೆ ಇಳಿಸುತ್ತದೆ ಎಂದು ಹೇಳಲಾಗುತ್ತಿದೆ. ರೆಪೋ ದರ ಇಳಿಕೆಯ ಲಾಭವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಿದರೆ, ಹೋಮ್‌ ಲೋನ್‌ ಮತ್ತು ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಇಎಂಐ ಹೊರೆ ಕಡಿಮೆಯಾಗಲಿದೆ. ರೆಪೋ ದರ ಇಳಿಕೆಯಾದಾಗ ಬ್ಯಾಂಕ್‌ಗಳಿಗೆ ಸಾಲದ ವೆಚ್ಚ ಕಡಿಮೆ ಆಗುತ್ತದೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಅವಕಾಶ ಹೆಚ್ಚುತ್ತದೆ. ಈ ವರ್ಷದ ಆರಂಭದಲ್ಲಿ ಅಧಿಕಾರ ವಹಿಸಿಕೊಂಡ ಆರ್‌ಬಿಐ ಗವರ್ನರ್‌ ಮಲ್ಹೋತ್ರಾ ಎರಡು ಬಾರಿ ರೆಪೋ ದರ ಕಡಿತ ಮಾಡಿದ್ದಾರೆ.

ಕಳೆದ ಮೂರು ತಿಂಗಳುಗಳಲ್ಲಿ (ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್) ಹಣದುಬ್ಬರವು ಶೇಕಡಾ 4 ಕ್ಕಿಂತ ಕಡಿಮೆ ಇದ್ದು, ಆಹಾರ ಹಣದುಬ್ಬರದಲ್ಲಿ ತೀವ್ರ ಕುಸಿತ ಕಂಡುಬಂದಿರುವುದರಿಂದ, ಸಿಪಿಐ 12 ತಿಂಗಳ ಅವಧಿಯಲ್ಲಿ ಶೇಕಡಾ 4 ರಷ್ಟು ಗುರಿಯೊಂದಿಗೆ ಸ್ಥಿರವಾಗಿ ಹೊಂದಿಕೆಯಾಗುವ ಸಾಧ್ಯತೆಯಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಖರೀದಿ ಒಪ್ಪಂದದ ದರ ಎಂದೂ ಕರೆಯಲ್ಪಡುವ ರೆಪೋ ದರವು ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ಆರ್‌ಬಿಐ ವಿಧಿಸುವ ಬಡ್ಡಿದರವಾಗಿದೆ. ಆದ್ದರಿಂದ ಅದನ್ನು ಕಡಿಮೆ ಮಾಡಿದಾಗ, ಬ್ಯಾಂಕ್‌ಗಳು ಅದರ ಬಹುತೇಕ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಫೆಬ್ರವರಿಯಲ್ಲಿ ಹಾಗೂ ಏಪ್ರಿಲ್‌ನಲ್ಲಿ ರೆಪೋ ದರ ಇಳಿದ ಪರಿಣಾಮ, ಪ್ರಮುಖ ಬ್ಯಾಂಕ್‌ಗಳು ಈಗಾಗಲೇ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿವೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries