ಕೊಚ್ಚಿ: ರಾಜ್ಯ ವಿಶ್ವವಿದ್ಯಾಲಯ ತಿದ್ದುಪಡಿ ಕಾಯ್ದೆಯ ಮೂಲಕ ಯುಜಿಸಿ ಕಾಯ್ದೆಯನ್ನು ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಶಿಕ್ಷಕರ ಸಂಘದ ವಿಚಾರ ಸಂಕಿರಣ ಬೊಟ್ಟುಮಾಡಿದೆ.
ರಾಜಕೀಯ ಅಧಿಕಾರವನ್ನು ಬಳಸಿಕೊಂಡು ವಿಶ್ವವಿದ್ಯಾಲಯಗಳ ಮೇಲೆ ಹಿಡಿತ ಸಾಧಿಸಲು ಇದು ಯೋಜಿತ ಕ್ರಮವಾಗಿದೆ. ಕಾನೂನಿನ ಮೂಲಕ, ಪ್ರ್ರೊ. ಚಾನ್ಸೆಲರ್ ಮತ್ತು ಸೂಪರ್ ಚಾನ್ಸೆಲರ್‍ಗಳನ್ನು ಮಾಡಲಾಗುತ್ತಿದೆ. ಯುಜಿಸಿ ನಿಯಮಾವಳಿಗಳಲ್ಲಿ ಉಲ್ಲೇಖಿಸದ ಪ್ರೊ. ಚಾನ್ಸೆಲರ್ ಮತ್ತು ಪ್ರೊ. ವೈಸ್ ಹುದ್ದೆಗಳನ್ನು ಬಳಸಿಕೊಂಡು ವಿಶ್ವವಿದ್ಯಾಲಯಗಳ ಕುಲಪತಿಗಳಾಗಿರುವ ರಾಜ್ಯಪಾಲರು ಮತ್ತು ಕುಲಪತಿಗಳ ಅಧಿಕಾರವನ್ನು ಅತಿಕ್ರಮಿಸುವ ಪ್ರಯತ್ನ ಕಾನೂನು ಬಾಹಿರ ಎಂದು ವಿಚಾರ ಸಂಕಿರಣವು ಗಮನಸೆಳೆದಿದೆ.
ಕೇರಳ ವಿಶ್ವವಿದ್ಯಾಲಯ ತಿದ್ದುಪಡಿ ಕಾಯ್ದೆ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಕುರಿತು ಎರ್ನಾಕುಳಂ ಬಿಟಿಎಚ್‍ನಲ್ಲಿ ನಡೆದ ವಿಚಾರ ಸಂಕಿರಣವನ್ನು ಕಾಲಡಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಕೆ.ಎಸ್. ರಾಧಾಕೃಷ್ಣನ್ ಉದ್ಘಾಟಿಸಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದ ಬೌದ್ಧಿಕ ಸಂಪತ್ತನ್ನು ಪುನರುಜ್ಜೀವನಗೊಳಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಪ್ರೊ. ಜ್ಯೋತ್ಸ್ನಾ ಜಿ. ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ಹಿರಿಯ ವಕೀಲ ಅಡ್ವ. ಎಸ್. ಸನಲ್ ಕುಮಾರ್, ಕ್ಯಾಲಿಕಟ್ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎ.ಕೆ. ಅನುರಾಜ್, ಕೇರಳ ಆರೋಗ್ಯ ವಿವಿ ಆಡಳಿತ ಮಂಡಳಿ ಸದಸ್ಯ ಪ್ರೊ.ಅಜಿತ್ ನೀಲಕಂಠನ್, ಶಿಕ್ಷಾ ಸಂಸ್ಕøತಿ ಉತ್ಥಾನ ನ್ಯಾಸ್ ರಾಷ್ಟ್ರೀಯ ಸಂಯೋಜಕ ಡಾ.ಎ.ವಿನೋದ್ ಕರುವಾರಕುಂಡು, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಪ್ರೊ.ಎಂ.ವಿ. ನಟೇಶನ್, ಕೊಚ್ಚಿನ್ ವಿವಿ ಸೆನೆಟ್ ಸದಸ್ಯ ಡಾ.ಪ್ರಿಯೇಶ್ ಸಿ.ಎ, ಉನ್ನತ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸುಧೀಶ್ ಕುಮಾರ್. ಕೆ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.





