HEALTH TIPS

ಕೌಶಲ್ಯ ಅಭಿವೃದ್ಧಿಯನ್ನು ಕಾರ್ಯತಂತ್ರ ಮತ್ತು ಪರಿಣಾಮಕಾರಿ ವಿಧಾನಗಳಿಂದ ಅಳವಡಿಸಬೇಕು: ಕೇಂದ್ರ ಸಚಿವ ಜಯಂತ್ ಚೌಧರಿ

ತಿರುವನಂತಪುರಂ: ಭಾರತದ ಯುವಜನರ ಆಕಾಂಕ್ಷೆಗಳು ಮತ್ತು ಆರ್ಥಿಕತೆಯ ಬೆಳೆಯುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿಗೆ ರಾಜ್ಯಗಳು ಹೆಚ್ಚು ಕಾರ್ಯತಂತ್ರ ಮತ್ತು ಪರಿಣಾಮಕಾರಿ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಜಯಂತ್ ಚೌಧರಿ ಹೇಳಿದರು. 

ಹೈದರಾಬಾದ್‍ನ ಕನ್ಹಾ ಶಾಂತಿ ವನಂನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (ಎಂಎಸ್,ಡಿ,ಇ.) ಆಯೋಜಿಸಿದ್ದ ಕೌಶಲ್ ಮಂಥನ್ ಪ್ರಾದೇಶಿಕ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು. 

ಸ್ಥಳೀಯ ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಯುವಕರ ಆಕಾಂಕ್ಷೆಗಳಿಗೆ ಹೊಂದಿಕೆಯಾಗುವ ಪರಿಹಾರಗಳನ್ನು ವಿನ್ಯಾಸಗೊಳಿಸಲು ನಾವು ರಾಜ್ಯಗಳಿಗೆ ಅಧಿಕಾರ ನೀಡಿದಾಗ ಮಾತ್ರ ನಾವು ಪರಿಣಾಮಕಾರಿ ಮತ್ತು ಸುಸ್ಥಿರ ಪರಿವರ್ತನೆಯನ್ನು ಸೃಷ್ಟಿಸಬಹುದು ಎಂದು ಜಯಂತ್ ಚೌಧರಿ ಹೇಳಿದರು.

ದೇಶದಾದ್ಯಂತದ ಐದು ಪ್ರಸ್ತಾವಿತ ಕೇಂದ್ರಗಳಲ್ಲಿ, ಹೈದರಾಬಾದ್ ಮತ್ತು ಚೆನ್ನೈನಲ್ಲಿರುವ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳಲ್ಲಿ (ಓSಖಿIs) ಎರಡು ಹೊಸ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಘೋಷಿಸಿದರು. ಈ ಕೇಂದ್ರಗಳು ಅತ್ಯುತ್ತಮ ಬೋಧಕ ತರಬೇತಿ ಮತ್ತು ಉದಯೋನ್ಮುಖ ವಲಯಗಳೊಂದಿಗೆ ಹೊಂದಿಕೆಯಾಗುವ ವಿಶೇಷ ಕೌಶಲ್ಯಗಳಿಗೆ ರಾಷ್ಟ್ರೀಯ ಉಲ್ಲೇಖ ಬಿಂದುಗಳಾಗಿ ಕಾರ್ಯನಿರ್ವಹಿಸುತ್ತವೆ.

ವಿಶ್ವಬ್ಯಾಂಕ್‍ನಂತಹ ತಜ್ಞ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸುವ ಸೂಕ್ಷ್ಮ ಕೌಶಲ್ಯ ಅಂತರ ಮೌಲ್ಯಮಾಪನಗಳ ಮೂಲಕ ಸ್ಥಳೀಯವಾಗಿ ಕೌಶಲ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಲು, ಜಿಲ್ಲಾ ಕಲೆಕ್ಟರ್‍ಗಳ ಸಹಯೋಗದೊಂದಿಗೆ ವಿಕೇಂದ್ರೀಕೃತ ಮತ್ತು ದತ್ತಾಂಶ-ಚಾಲಿತ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಜಯಂತ್ ಚೌಧರಿ ರಾಜ್ಯಗಳನ್ನು ಒತ್ತಾಯಿಸಿದರು.

ರಾಜ್ಯಗಳಲ್ಲಿ ಹೊಸದಾಗಿ ಸ್ಥಾಪಿಸಲಾದ ಐಟಿಐಗಳಲ್ಲಿ ಸಿಐಟಿಎಸ್ (ಕ್ರಾಫ್ಟ್ ಬೋಧಕ ತರಬೇತಿ ಯೋಜನೆ) ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲು ಸಚಿವರು ಸಲಹೆ ನೀಡಿದರು. ಎನ್‍ಸಿವಿಟಿ ಮಾನದಂಡಗಳ ಪ್ರಕಾರ ತರಬೇತಿ ಶ್ರೇಷ್ಠತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯಲು ಮತ್ತು ಸರ್ಕಾರಿ ಸ್ವಾಮ್ಯದ ಐಟಿಐಗಳಿಗೆ ದೃಢವಾದ ಶ್ರೇಣೀಕರಣ ಮತ್ತು ಮೌಲ್ಯಮಾಪನ ವಿಧಾನಗಳನ್ನು ಸ್ಥಾಪಿಸಲು ರಾಜ್ಯಗಳು ತಮ್ಮ ನೇಮಕಾತಿ ನಿಯಮಗಳನ್ನು (ಆರ್‍ಆರ್) ಪರಿಷ್ಕರಿಸಬೇಕು ಎಂದು ಸಚಿವರು ಹೇಳಿದರು.

ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ವೃತ್ತಿಪರ ತರಬೇತಿ ನಿರ್ದೇಶಕರು, ಪ್ರಾದೇಶಿಕ ನಿರ್ದೇಶಕರು ಮತ್ತು ಆರ್‍ಡಿಎಸ್‍ಡಿಇಗಳಿಂದ ಉಪ ಮಹಾನಿರ್ದೇಶಕರು, ಎಂಎಸ್‍ಡಿಇ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ಹಿರಿಯ ಸಲಹೆಗಾರರು ಮತ್ತು ತಾಂತ್ರಿಕ ತಜ್ಞರು ಮತ್ತು ದಕ್ಷಿಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೌಶಲ್ಯ ಅಭಿವೃದ್ಧಿ ಸಚಿವರು ಸೇರಿದಂತೆ ಎಂಎಸ್‍ಡಿಇಯ ಹಿರಿಯ ಅಧಿಕಾರಿಗಳು ಸೇರಿದಂತೆ 120 ಕ್ಕೂ ಹೆಚ್ಚು ಜನರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ, ಕೇರಳದ ಸಾಮಾನ್ಯ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ವಿ. ಶಿವನ್ ಕುಟ್ಟಿ, ಕರ್ನಾಟಕ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಮಾತನಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries