HEALTH TIPS

ಆಪರೇಷನ್‌ ಸಿಂಧೂರ | ಸರ್ವಪಕ್ಷಗಳ ನಿಯೋಗ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 'ಆಪರೇಷನ್‌ ಸಿಂಧೂರ' ಬಳಿಕ ಭಯೋತ್ಪಾದನೆ ಕುರಿತು ಭಾರತದ ನಿಲುವು ದೃಢಪಡಿಸಲು ವಿವಿಧ ದೇಶಗಳಿಗೆ ಪ್ರವಾಸ ತೆರಳಿದ್ದ ಸರ್ವಪಕ್ಷ ನಿಯೋಗಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಲ್ಲಿ ಭೇಟಿ ಮಾಡಿದರು.

ಪ್ರವಾಸ ಕೈಗೊಂಡಿದ್ದ ಸಂಸದರು ಈ ವೇಳೆ ಪ್ರಧಾನಿ ಅವರ ಜೊತೆಗೆ ಅನುಭವ ಹಂಚಿಕೊಂಡರು. ವಿವಿಧ ‍ಪಕ್ಷಗಳಿಗೆ ಸೇರಿದ ಸುಮಾರು 50 ಮಂದಿ ಹಾಲಿ ಸಂಸದರು ಪ್ರವಾಸ ಕೈಗೊಂಡಿದ್ದರು.

ಮಾಜಿ ಸಂಸದರು, ‌ಮಾಜಿ ರಾಯಭಾರಿಗಳು ಕೂಡಾ ಈ ನಿಯೋಗದಲ್ಲಿದ್ದು, ಒಟ್ಟು 33 ದೇಶಗಳಿಗೆ ಭೇಟಿ ನೀಡಿದ್ದರು. ನಾಲ್ಕು ನಿಯೋಗದ ನೇತೃತ್ವವನ್ನು ಎನ್‌ಡಿಎ ಪಕ್ಷಗಳ ಸದಸ್ಯರು, ಮೂರು ನಿಯೋಗಗಳ ನೇತೃತ್ವವನ್ನು ಕ್ರಮವಾಗಿ ಕಾಂಗ್ರೆಸ್, ಡಿಎಂಕೆ ಮತ್ತು ಎನ್‌ಸಿಪಿ (ಎಸ್‌ಪಿ) ಸಂಸದರು ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries