ಗುವಾಹಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಾರತಕ್ಕಿಂತ ಪಾಕಿಸ್ತಾನದ ಬಗ್ಗಯೇ ಹೆಚ್ಚು ಕಾಳಜಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಂಗಳವಾರ ಟೀಕಿಸಿದ್ದಾರೆ.
'ಆಪರೇಷನ್ ಸಿಂಧೂರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದ್ದಾರೆ.
ಅದರೆ, 'ನರೇಂದರ್-ಸರೆಂಡರ್' ಎಂದು ಮೂದಲಿಸುವ ಮೂಲಕ ರಾಹುಲ್ ಗಾಂಧಿ ಅವರು ದೇಶದ ಸಶಸ್ತ್ರ ಪಡೆಗಳಿಗೆ ಅವಮಾನಿಸಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ರಾಜ್ಯ ಘಟಕದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಪರೇಷನ್ ಸಿಂಧೂರ ವೇಳೆ ಭಾರತಕ್ಕೆ ಆಗಿರುವ ನಷ್ಟವೆಷ್ಟು ಎಂದು ಕಾಂಗ್ರೆಸ್ ಕೇಳುತ್ತಿದೆ. ಸಶಸ್ತ್ರ ಪಡೆಗಳಿಗೆ ಕೆಲ ಮಟ್ಟಿನ ನಷ್ಟ ಆಗಿರಬಹುದು. ಆದರೆ, ಯುದ್ಧದ ಪರಿಸ್ಥಿತಿ ಇನ್ನೂ ಮುಂದುವರಿದಿದೆ. ಹೀಗಾಗಿ, ನಮ್ಮ ಪಡೆಗಳು ಪಾಕಿಸ್ತಾನಕ್ಕೆ ಎಷ್ಟು ಹಾನಿ ಮಾಡಿವೆ ಎಂದು ನಾವು ಕೇಳಬೇಕು' ಎಂದರು.
'ಪಾಕಿಸ್ತಾನಕ್ಕೆ ಎಷ್ಟು ಹಾನಿ ಉಂಟು ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಕೇಳಿದ್ದ ಪಕ್ಷದಲ್ಲಿ, 70 ಉಗ್ರರನ್ನು ಕೊಲ್ಲಲಾಗಿದ್ದು, ಎಂಟು ವಿಮಾನ ನಿಲ್ದಾಣಗಳನ್ನು ನಾಶ ಮಾಡಲಾಗಿದೆ ಎಂದು ಮೋದಿ ಉತ್ತರಿಸುತ್ತಿದ್ದರು' ಎಂದೂ ಶರ್ಮಾ ಹೇಳಿದರು.
ಗೊಗೋಯಿ ವಿರುದ್ಧ ಟೀಕೆ: ಕಾಂಗ್ರೆಸ್‌ನ ಅಸ್ಸಾಂ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ, ಸಂಸದ ಗೌರವ ಗೊಗೋಯಿ ವಿರುದ್ಧವೂ ಹಿಮಂತ ಬಿಸ್ವ ಶರ್ಮಾ ಟೀಕಾಪ್ರಹಾರ ನಡೆಸಿದರು.
'ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರು ಪಾಕಿಸ್ತಾನದ ಪರ ಇರುವ ಕಾರಣ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಹ ಪಾಕಿಸ್ತಾನದ ಪರ ಇರಲೇಬೇಕು' ಎಂದು ಗೊಗೋಯಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
'ಅಸ್ಸಾಂ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದರೂ, ಅವರನ್ನು (ಗೊಗೋಯಿ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂಬಂತೆ ಪ್ರಚಾರ ಮಾಡಲಾಗಿತ್ತಿದೆ' ಎಂದು ಲೇವಡಿ ಮಾಡಿದರು.
-ಹಿಮಂತ ಬಿಸ್ವ ಶರ್ಮಾ ಅಸ್ಸಾಂ ಮುಖ್ಯಮಂತ್ರಿಕಾಂಗ್ರೆಸ್ ಪಕ್ಷ ಈಶಾನ್ಯ ಭಾಗಕ್ಕೆ ಸಾಕಷ್ಟು ಹಾನಿ ಮಾಡಿದೆ. ಆಗ ನಡೆದ ಯುದ್ಧದ ನಂತರ ಭಾರತವು ಬಾಂಗ್ಲಾದೇಶವನ್ನು ತನ್ನದಾಗಿಸಿಕೊಳ್ಳಬಹುದಿತ್ತು.




