ನಿಮ್ಮ ಮೊಬೈಲ್ ಬ್ಯಾಟರಿ ಬೇಗ ಖಾಲಿ ಆಗ್ತಿದ್ಯಾ? ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಇದು ಕಾಮನ್ ಪ್ರಾಬ್ಲಮ್. ಹೈ ರಿಫ್ರೆಶ್ ರೇಟ್ ಡಿಸ್‌ಪ್ಲೇ, ಪವರ್‌ಫುಲ್ ಬ್ಯಾಗ್ರೌಂಡ್ ಆಪ್ಸ್, 5G ಕನೆಕ್ಷನ್ ಇದೆಲ್ಲದರಿಂದ ಬ್ಯಾಟರಿ ಬೇಗ ಕಡಿಮೆಯಾಗುತ್ತದೆ.
ವಾಟ್ಸಾಪ್, ಫೇಸ್‌ಬುಕ್, ಗೂಗಲ್ ಮ್ಯಾಪ್ಸ್‌ಗಳು ಬ್ಯಾಗ್ರೌಂಡ್‌ನಲ್ಲಿ ಡೇಟಾ ಯೂಸ್ ಮಾಡ್ತಾ ಇರ್ತಾವೆ. ಮೊಬೈಲ್ ಐಡಲ್ ಇದ್ರೂ ಬ್ಯಾಟರಿ ಬೇಗ ಖಾಲಿ ಆಗ್ತಿದ್ರೆ ಬ್ಯಾಗ್ರೌಂಡ್ ಆಕ್ಟಿವಿಟಿ, ಸಿಗ್ನಲ್ ಪ್ರಾಬ್ಲಮ್ ಇರಬಹುದು. ಆದ್ರೆ ಚಿಂತೆ ಬೇಡ, ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಬ್ಯಾಟರಿ ಲೈಫ್ ಜಾಸ್ತಿ ಮಾಡ್ಕೋಬಹುದು.

ಬ್ಯಾಟರಿ ಖಾಲಿ ಮಾಡೋ ದೊಡ್ಡ ಕಾರಣ ಡಿಸ್‌ಪ್ಲೇ. ಬ್ರೈಟ್‌ನೆಸ್ ಜಾಸ್ತಿ ಇದ್ರೆ ಬ್ಯಾಟರಿ ಬೇಗ ಖಾಲಿ ಆಗುತ್ತೆ. ಆಟೋ ಬ್ರೈಟ್‌ನೆಸ್ ಆನ್ ಮಾಡಿ. 90Hz ಅಥವಾ 120Hz ರಿಫ್ರೆಶ್ ರೇಟ್ ಬ್ಯಾಟರಿ ತಿನ್ನುತ್ತೆ. ಸೆಟ್ಟಿಂಗ್ಸ್ > ಡಿಸ್‌ಪ್ಲೇ > ರಿಫ್ರೆಶ್ ರೇಟ್‌ನಲ್ಲಿ 60Hz ಆಯ್ಕೆ ಮಾಡಿ. ಲೈವ್ ವಾಲ್‌ಪೇಪರ್ ಬಳಸಬೇಡಿ.

Instagram, Snapchat, YouTube, Facebook ಬ್ಯಾಗ್ರೌಂಡ್‌ನಲ್ಲಿ ರನ್ ಆಗ್ತಿದ್ರೆ ಫೋರ್ಸ್ ಸ್ಟಾಪ್ ಮಾಡಿ.
ಆಂಡ್ರಾಯ್ಡ್‌ನಲ್ಲಿ Settings > Apps > App > Battery > Restricted ಆಯ್ಕೆ ಮಾಡಿ.
ಐಫೋನ್‌ನಲ್ಲಿ Settings > General > Background App Refresh ಆಫ್ ಮಾಡಿ. ಬ
ಳಸದ ಆಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ, ಕ್ಯಾಶ್ ಕ್ಲಿಯರ್ ಮಾಡಿ.
ಸಿಗ್ನಲ್ ಕಡಿಮೆ ಇದ್ರೆ 4Gಗೆ ಬದಲಿಸಿ ಅಥವಾ ಒಂದು ಸಿಮ್ ಆಫ್ ಮಾಡಿ. Wi-Fi, Bluetooth, GPS ಆಫ್ ಮಾಡಿ.

ಬೇಡವಾದಾಗ Wi-Fi, Bluetooth ಮತ್ತು GPS ಆಫ್ ಮಾಡಿ. ಆಟೋಮ್ಯಾಟಿಕ್ ಅಪ್ಡೇಟ್ ಆಫ್ ಮಾಡಿ. ಆಂಡ್ರಾಯ್ಡ್‌ನಲ್ಲಿ 30% ಕ್ಕಿಂತ ಕಡಿಮೆ ಚಾರ್ಜ್ ಇದ್ರೆ "Battery Saver" ಆನ್ ಮಾಡಿ. ಐಫೋನ್‌ನಲ್ಲಿ "Low Power Mode" ಉಪಯೋಗಿಸಿ. ಸಿಸ್ಟಮ್ ಅಪ್ಡೇಟ್ ಮಾಡ್ತಾ ಇರಿ. ರಾತ್ರಿಯೆಲ್ಲಾ ಚಾರ್ಜ್ ಮಾಡಬೇಡಿ. ಡಾರ್ಕ್ ಥೀಮ್ ಯೂಸ್ ಮಾಡಿ.

"Adaptive Battery" (Android) ಮತ್ತು "Battery Health Management" (iPhone) ಫೀಚರ್ ಉಪಯೋಗಿಸಿ. ಸಿಸ್ಟಮ್ ಅಪ್ಡೇಟ್ ಮಾಡ್ತಾ ಇರಿ. ರಾತ್ರಿಯೆಲ್ಲಾ ಚಾರ್ಜ್ ಮಾಡಬೇಡಿ, ಚಾರ್ಜ್ ಮಾಡುವಾಗ ಮೊಬೈಲ್ ಹೀಟ್ ಆಗೋಕೆ ಬಿಡಬೇಡಿ.
ಮೊಬೈಲ್ 2-3 ವರ್ಷಕ್ಕಿಂತ ಹಳೆಯದಾದ್ರೆ ಬ್ಯಾಟರಿ ಬದಲಿಸಿ. ಡಾರ್ಕ್ ಥೀಮ್ ಯೂಸ್ ಮಾಡಿ. ಈ ಟಿಪ್ಸ್ ಫಾಲೋ ಮಾಡಿದ್ರೆ ಬ್ಯಾಟರಿ ಲೈಫ್ ಜಾಸ್ತಿ ಮಾಡ್ಕೋಬಹುದು.




