ಉಪ್ಪಳ: ಕುಬಣೂರು ಡಾ, ಬಿ.ಆರ್ ಕಲಾ ಸಂಘ ,ಅಂಬೇಡ್ಕರ್ ನಗರ ಇದರ ವತಿಯಿಂದ ಸತತ 19ನೇ ವರ್ಷದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕೋಪಕರಣದ ವಿತರಣಾ ಕಾರ್ಯಕ್ರಮ ಭಾನುವಾರ ನಡೆಯಿತು. ಯುವಕವಿ ಹರೀಶ್ ಸುಲಾಯಿ ಒಡ್ಡಂಬೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಚಿಣ್ಣರ ಚಿಲುಮೆ ಸಮಿತಿ ಕಾಸರಗೋಡು ಇದರ ನಿರ್ದೇಶಕರು ಅಶೋಕ್ ಕೊಡ್ಲಮೊಗರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸುಹಾಸಿನಿ ಟೀಚರ್, ನಿವೇದಿತಾ ಟೀಚರ್, ಕಲಾ ಸಂಘದ ಅಧ್ಯಕ್ಷ ಶಿವಪ್ರಸಾದ್, ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ, ರೈಲ್ವೆ ಉದ್ಯೋಗಿ ಸದಾನಂದ ಕುಬಣೂರು ಉಪಸ್ಥಿತರಿದ್ದು ಶುಭಾಶಂಸನೆಗೈದರು. ಮಕ್ಕಳ ರಕ್ಷಕರು ಸಂಘದ ಸದಸ್ಯರು ಉಪಸ್ಥಿತರಿದ್ದರು. ವಿಶ್ವನಾಥ್ ಮಾಸ್ತರ್ ಕುಬಣೂರು ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು. ಮೋಹಿನಿ ಟೀಚರ್ ವಂದಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿಯಿಂದ ತೊಡಗಿ ಹತ್ತನೆಯ ತರಗತಿಯ ವರೆಗಿನ ಸುಮಾರು 45 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಕಲಿಕೋಪಕರಣ ವಿತರಿಸಲಾಯಿತು.







