ಜಿಯೋ ಬಳಕೆದಾರರಿಗೆ ಸೇವೆಗಳು ಸ್ಥಗಿತಗೊಂಡಿವೆ. ಡೌನ್‌ಡೆಕ್ಟರ್ ಪ್ರಕಾರ, ಸುಮಾರು 12,000 ಜಿಯೋ ಬಳಕೆದಾರರು ನೆಟ್‌ವರ್ಕ್ ಸಮಸ್ಯೆಗಳನ್ನ ವರದಿ ಮಾಡಿದ್ದಾರೆ. ಜಿಯೋ ಡೌನ್ ಸಮಸ್ಯೆ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ.
ಹಲವಾರು ಬಳಕೆದಾರರು ಹಠಾತ್ ಜಿಯೋ ವ್ಯತ್ಯಯದ ಬಗ್ಗೆ ಸಾಮಾಜಿಕ ಮಾಧ್ಯಮ X ನಲ್ಲಿ ವರದಿ ಮಾಡಿದ್ದಾರೆ.
X ನಲ್ಲಿನ ಒಂದು ಪೋಸ್ಟ್'ನಲ್ಲಿ, ಜಿಯೋ ಬಳಕೆದಾರರು, "ಕೇರಳದಲ್ಲಿ ಜಿಯೋ ನೆಟ್‌ವರ್ಕ್ ಸ್ಥಗಿತಗೊಂಡಿದೆಯೇ ಅಥವಾ ನನಗೆ ಮಾತ್ರ ಬರುತ್ತಿಲ್ಲವೇ?" ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, "ಕೇರಳದಲ್ಲಿ ಜಿಯೋ ನೆಟ್‌ವರ್ಕ್ ಸ್ಥಗಿತಗೊಂಡಿದೆ. ಇತರ ರಾಜ್ಯಗಳ ಬಗ್ಗೆ ಏನು?" ಎಂದು ಹಂಚಿಕೊಂಡಿದ್ದಾರೆ. ಮತ್ತೊಬ್ಬ ಜಿಯೋ ಬಳಕೆದಾರರು, "JIO ಸೇವೆ ಇಲ್ಲ…JIO ವ್ಯತ್ಯಯವಾಗಿದೆ" ಎಂದು ಹೇಳಿದರು.




