HEALTH TIPS

ಇಸ್ರೇಲ್‌ ಭೀಕರ ದಾಳಿಗೆ ನರಕದಂತಾಯ್ತು ಇರಾನ್‌

ದುಬೈ: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಮರ ಭೀಕರ ಸ್ವರೂಪ ಪಡೆದುಕೊಂಡಿದ್ದು, ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ತೆಹರಾನ್‌ನಲ್ಲಿ ಕತ್ತಲು ಸರಿಯುವ ಮುಂಚೆ ಭಾರಿ ಸ್ಫೋಟ ಸಂಭವಿಸಿದ್ದು, ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಹಲವಾರು ಪ್ರಮುಖ ಕಟ್ಟಡಗಳು ಧ್ವಂಸಗೊಂಡಿವೆ. ಅಪಾರ ಸಾವು- ನೋವು ಉಂಟಾಗಿವೆ.

ಇಸ್ರೇಲ್‌ ಈ ಮುನ್ನ ಮೆಹರಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಪ್ರದೇಶದಲ್ಲಿ ಮಿಲಿಟರಿ ಕಟ್ಟಡಗಳು, ಔಷಧ ಕಂಪೆನಿಗಳು ಮತ್ತು ಕೈಗಾರಿಕಾ ಸಂಸ್ಥೆಗಳು ನೆಲೆಗೊಂಡಿವೆ. ಇಸ್ರೇಲ್‌ ತಾನು ಇರಾನ್‌ನ ಜನರಲ್‌ ಅಲಿ ಶದಾನಿ ಅವರನ್ನು ಹತ್ಯೆಗೈದಿರುವುದಾಗಿ ಪ್ರತಿಪಾದಿಸಿದೆ.

ಶದಾನಿ ಅವರು ಶುಕ್ರವಾರದ ಇಸ್ರೇಲ್‌ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಜನರಲ್‌ ಗುಲಾಮ್‌ ಅಲಿರಶೀದ್‌ ಅವರ ಸ್ಥಾನದಲ್ಲಿ ನೇಮಕಗೊಂಡಿದ್ದರು. ಈ ಪ್ರದೇಶದಲ್ಲಿ ಅನಿಶ್ಚಿತತೆ ತಲೆದೋರಿದ್ದು, ಜನರು ಸುರಕ್ಷತೆಗಾಗಿ ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರು ಕೆನಡಾದಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಿಂದ ಅರ್ಧದಲ್ಲಿಯೇ ನಿರ್ಗಮಿಸಿದ್ದು, ಇರಾನ್‌ ಬೇಷರತ್‌ ಕ್ಷಮಾಯಾಚಿಸಿ ಶರಣಾಗಬೇಕು ಎಂದು ತಾಕೀತು ಮಾಡಿದ್ದಾರೆ. ಅಮೆರಿಕದ ತಾಳೆ ಮಿತಿಮೀರುತ್ತಿದೆ.

ಈ ಪ್ರದೇಶದಲ್ಲಿ ಸದ್ಯದ ಮಟ್ಟಿಗೆ ಮಾತುಕತೆ ಹೊರತಾಗಿ ಶಾಂತಿ ಅಥವಾ ಕದನ ವಿರಾಮ ಉಂಟಾಗುವ ಬಗ್ಗೆ ಖಾತರಿಯಿಲ್ಲ. ಇರಾನ್‌, ಇಸ್ರೇಲ್‌ಗೆ ಮಂಡಿಯೂರಬೇಕು. ನಾನು ಇರಾನ್‌ ಮುಖ್ಯಸ್ಥ ಖಮೇನಿ ಅವರನ್ನು ಸದ್ಯದ ಮಟ್ಟಿಗಾದರೂ ಹತ್ಯೆ ಮಾಡುವುದಿಲ್ಲ ಎಂಬ ಭರವಸೆ ಕೊಡುತ್ತೇನೆ.

ನಮ ಉಪಾಧ್ಯಕ್ಷರಾದ ಜೆ.ಡಿ. ವಾನ್ಸ್ ಮತ್ತು ವಿಶೇಷ ಪ್ರತಿನಿಧಿ ಸ್ಟೀವ್‌ ವಿಟ್‌ಕಾಫ್‌ ಅವರನ್ನು ಇರಾನೀಯರೊಂದಿಗೆ ಮಾತುಕತೆ ನಡೆಸಲು ಕಳುಹಿಸಲು ಸಿದ್ಧನಿದ್ದೇನೆ ಎಂದು ಟ್ರಂಪ್‌ ಹೇಳಿದ್ದಾರೆ. ಈ ನಡುವೆ ಅಮೆರಿಕವೂ ಮಧ್ಯ ಪ್ರಾಚ್ಯದ ಸುತ್ತಮುತ್ತ ಇರಾನ್‌ ದಾಳಿಗಳಿಂದ ಇಸ್ರೇಲ್‌ ಅನ್ನು ಸಂರಕ್ಷಿಸಲು ಯುದ್ಧ ವಿಮಾನಗಳು ಮತ್ತು ಸಮರ ನೌಕೆಗಳನ್ನು ಸಜ್ಜಾಗಿರಿಸಿದೆ.
ಟ್ರಂಪ್‌ ಮತ್ತು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೇತನ್ಯಾಹು ಅವರು ಪ್ರಸಕ್ತ ಸನ್ನಿವೇಶ ಮತ್ತು ಬೆಳವಣಿಗೆಗಳ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇರಾನ್‌ನಲ್ಲಿ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದು, ದಿನಸಿ, ಗ್ಯಾಸ್‌‍, ಇತ್ಯಾದಿ ದಿನಬಳಕೆ ವಸ್ತುಗಳಿಗಾಗಿ ಹಾಹಾಕಾರ ಉಂಟಾಗಿದೆ.

ತೆಹರಾನ್‌ನಲ್ಲಿರುವ ಪ್ರತಿಯೊಬ್ಬ ಇಸ್ರೇಲಿಗರು ನಗರವನ್ನು ತೊರೆಯಬೇಕು ಎಂದು ಟ್ರಂಪ್‌ ತಾಕೀತು ಮಾಡಿದ್ದಾರೆ. ಇದರಿಂದ ಯುದ್ಧ ಸಂತ್ರಸ್ತ 3 ಲಕ್ಷ 30 ಸಾವಿರ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ.

ತೆಹರಾನ್‌ 10 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಇಸ್ರೇಲ್‌ನ ಇಡೀ ಜನಸಂಖ್ಯೆಗಿಂತ ಹೆಚ್ಚಾಗಿದೆ.ಮಂಗಳವಾರ ಬೆಳಗ್ಗೆ ತೆಹರಾನ್‌ ಪಟ್ಟಣ ಪ್ರದೇಶ ಬಿಕೋ ಎನ್ನುತ್ತಿತ್ತು. ಪುರಾತನ ಗ್ರ್ಯಾಂಡ್‌ ಬಜಾರ್‌ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳು ಬಂದ್‌ ಆಗಿದ್ದು, ಸುರಕ್ಷಿತ ಪ್ರದೇಶಗಳು ಮತ್ತು ಅಡಗು ತಾಣಗಳತ್ತ ನಾಗರಿಕರು ಧಾವಿಸುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries