ಕೊಚ್ಚಿ: ಕೇರಳ ಕರಾವಳಿಯಲ್ಲಿ ಮತ್ತೊಂದು ಸರಕು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋಸ್ಟ್ ಗಾರ್ಡ್‍ನ ತ್ವರಿತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಸಿಂಗಾಪುರ ಧ್ವಜ ಹೊತ್ತಿದ್ದ ಸರಕು ಹಡಗಿನ ಎಂ.ವಿ. ಇಂಟರ್ಯಾಸಿಯಾ ಟೆನಾಸಿಟಿ (ಐಎಂಒ 10181445) ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾರತೀಯ ಕೋಸ್ಟ್ ಗಾರ್ಡ್ ಸಹಾಯದಿಂದ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ.
ಹಡಗಿನ ಡೆಕ್‍ನಲ್ಲಿ ಸಂಗ್ರಹಿಸಲಾದ ಕಂಟೇನರ್‍ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಮಾಹಿತಿ ಬಂದ ತಕ್ಷಣ, ಕೋಸ್ಟ್ ಗಾರ್ಡ್‍ನ ಕಡಲಾಚೆಯ ಗಸ್ತು ಹಡಗು ಐಸಿಜಿಎಸ್ ಸಚೇತ್ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ವೈಮಾನಿಕ ಕಣ್ಗಾವಲಿಗಾಗಿ ಕೋಸ್ಟ್ ಗಾರ್ಡ್ ಡಾರ್ನಿಯರ್ ವಿಮಾನವನ್ನು ಸಹ ಸ್ಥಳದಲ್ಲಿ ನಿಯೋಜಿಸಿತು.





