HEALTH TIPS

ಅಣ್ವಸ್ತ್ರ ಹೊತ್ತೊಯ್ಯಬಲ್ಲ ಬಾಂಬರ್ ಗುರಿಯಾಗಿಸಿ ರಷ್ಯಾ ಮೇಲೆ ಉಕ್ರೇನ್‌ ದಾಳಿ

ಮಾಸ್ಕೊ: ರಷ್ಯಾದ ಸೈಬೀರಿಯಾದಲ್ಲಿನ ಸೇನಾನೆಲೆ ಮೇಲೆ ಉಕ್ರೇನ್‌ ಪಡೆಗಳು ಭಾನುವಾರ ಭಾರಿ ದಾಳಿ ನಡೆಸಿವೆ.

ಈ ದಾಳಿಯಲ್ಲಿ ರಷ್ಯಾದ 40ಕ್ಕೂ ಅಧಿಕ ಯುದ್ಧವಿಮಾನಗಳು ನಾಶವಾಗಿವೆ ಎಂದು ಮೂಲಗಳು ಹೇಳಿವೆ.

'ಉಕ್ರೇನ್‌ ಗಡಿಯಿಂದ ಬಹಳ ದೂರದಲ್ಲಿರುವ ಈ ವಾಯುನೆಲೆಗಳನ್ನು ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಲು ಒಂದರಿಂದ ಒಂದೂವರೆ ವರ್ಷದಿಂದ ಸಿದ್ಧತೆ ನಡೆದಿತ್ತು.

ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರೇ ಸ್ವತಃ ಈ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಷ್ಯಾ ಕೂಡ ಉಕ್ರೇನ್‌ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿದೆ. ಕದನ ವಿರಾಮ ಕುರಿತು ಟರ್ಕಿಯ ಇಸ್ತಾಂಬುಲ್‌ನಲ್ಲಿ ನಿಗದಿಯಾಗಿರುವ ಸಭೆಗೂ ಒಂದು ದಿನ ಮೊದಲು ಈ ಬೆಳವಣಿಗೆಗಳು ನಡೆದಿವೆ.

ಅಣ್ವಸ್ತ್ರಗಳನ್ನು ಹೊತ್ತು, ದೂರದ ಗುರಿಗಳನ್ನು ತಲುಪುವ ಸಾಮರ್ಥ್ಯವಿರುವ ಬಾಂಬರ್‌ಗಳು ಈ ನೆಲೆಯಲ್ಲಿದ್ದವು. ಉಕ್ರೇನ್‌ ನಡೆಸಿದ ದಾಳಿಯಲ್ಲಿ ಈ ಯುದ್ಧವಿಮಾನಗಳು ಹೊತ್ತಿ ಉರಿಯತ್ತಿರುವ ದೃಶ್ಯಗಳಿರುವ ವಿಡಿಯೊ ಹಾಗೂ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಉಕ್ರೇನ್ ಗಡಿಯಿಂದ 4,300 ಕಿ.ಮೀ.ಗೂ ಅಧಿಕ ದೂರದಲ್ಲಿರುವ ಬೆಲಾಯಾ ವಾಯುನೆಲೆ ಗುರಿಯಾಗಿಸಿ ಇದೇ ಮೊಲದ ಬಾರಿಗೆ ಇಂತಹ ಭಾರಿ ದಾಳಿ ನಡೆದಿದೆ ಎಂದು ರಷ್ಯಾ ಪರ ಬ್ಲಾಗರ್‌ಗಳು ಹೇಳಿಕೊಂಡಿದ್ದಾರೆ.

ಈ ವಿಡಿಯೊ ಹಾಗೂ ಚಿತ್ರಗಳನ್ನು ದೃಢಪಡಿಸಲು ಸಾಧ್ಯವಾಗಿಲ್ಲ ಎಂದು ರಾಯಿಟರ್ಸ್‌ ಹೇಳಿದೆ.

'ಉಕ್ರೇನ್‌ ಆಂತರಿಕ ಭದ್ರತೆ ಹೊಣೆ ಹೊತ್ತಿರುವ ಎಸ್‌ಬಿಯು, ರಷ್ಯಾದ 40ಕ್ಕೂ ಅಧಿಕ ಯುದ್ಧವಿಮಾನಗಳನ್ನು ಗುರಿಯಾಗಿಸಿ ಭಾರಿ ಸಂಖ್ಯೆಯ ಡ್ರೋನ್‌ಗಳಿಂದ ದಾಳಿ ನಡೆಸಿದೆ' ಎಂದು ಉಕ್ರೇನ್‌ ಗುಪ್ತಚರ ಸಂಸ್ಥೆ ಅಧಿಕಾರಿಯೊಬ್ಬರು ಹೇಳಿದ್ದಾಗಿ ರಾಯಿಟರ್ಸ್‌ ವರದಿ ಮಾಡಿದೆ.

'ರಷ್ಯಾದ ಟಿಯು-95 ಹಾಗೂ ಟಿಯು-22 ಯುದ್ಧವಿಮಾನಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಉಕ್ರೇನ್‌ನಲ್ಲಿನ ದೂರದ ಗುರಿಗಳನ್ನು ನಾಶಪಡಿಸಲು ರಷ್ಯಾ ಈ ಯುದ್ಧವಿಮಾನಗಳನ್ನು ಬಳಸುತ್ತಿತ್ತು' ಎಂದು ಉಕ್ರೇನ್‌ನ ಮೂಲಗಳು ಹೇಳಿವೆ.

ರಷ್ಯಾ ಉತ್ತರ ಭಾಗದಲ್ಲಿರುವ ಮುರ್ಮನಸ್ಕ್‌ದಲ್ಲಿರುವ ಒಲೆನ್ಯಾ ವಾಯುನೆಲೆ ಮೇಲೆಯೂ ಉಕ್ರೇನ್‌ ಡ್ರೋನ್‌ ದಾಳಿ ನಡೆಸಿದೆ ಎಂದೂ ಮೂಲಗಳು ಹೇಳಿವೆ.

ಇಗೊರ್ ಕೊಬ್ಜೇವ್ ಇರ್ಕುತ್ಸ್‌ಕ್ ಪ್ರಾಂತ್ಯದ ಗವರ್ನರ್ಯುಸೊಲ್‌ಸ್ಕಿ ಜಿಲ್ಲೆಯ ಸ್ರೆಡ್ನಿ ಗ್ರಾಮದ ಬಳಿಯ ವಾಯುನೆಲೆ ಮೇಲೆ ಡ್ರೋನ್‌ ದಾಳಿ ನಡೆದಿದೆ. ಸೈಬೀರಿಯಾದಲ್ಲಿ ನಡೆದ ಇಂತಹ ಮೊದಲ ದಾಳಿ ಇದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries