ಮಂಜೇಶ್ವರ: ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಸೇವಾ ಚಟುವಟಿಕೆಗಳ ಕೇಂದ್ರವಾಗಿರುವ ಮಂಜೇಶ್ವರ ಮಳ್'ಹರ್ ಸಂಸ್ಥೆಗಳ ಬೆಳ್ಳಿಹಬ್ಬ ಮಹೋತ್ಸವ ಸಂಭ್ರಮ ಅದ್ಧೂರಿಯಾಗಿ ಆರಂಭಗೊಂಡಿತು. ಇದೇ ಸಂದರ್ಭ ಸಮಸ್ತ ಕೇಂದ್ರ ಮುಶಾವರ ಸದಸ್ಯ, ಹಲವು ಮೊಹಲ್ಲಾಗಳ ಖಾಝಿ ಮತ್ತು ಮಳ್'ಹರ್ ಶಿಲ್ಪಿ ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿ ಅವರ 10ನೇ ಉರುಸ್‍ಗೆ ಚಾಲನೆ ನೀಡಲಾಯಿತು. ಜೂ. 22ರಂದು ಸಾವಿರಾರು ಜನರಿಗೆ ತುಪ್ಪದ ಅನ್ನ ವಿತರಣೆಯೊಂದಿಗೆ ಉರುಸ್ ಸಂಪನ್ನೊಳ್ಳಲಿದೆ. ಮೊದಲ ದಿನ ನಡೆದ ಸಮಾರಂಭದಲ್ಲಿ ಸೈಯದ್ ಹಸನ್ ಪೂಕೋಯ ತಂಙಳ್ ಕರುವಂತಿರುತ್ತಿ ಪ್ರಾರ್ಥನೆ ನಿರ್ವಹಿಸಿದರು. ಸಮಸ್ತ ಉಪಾಧ್ಯಕ್ಷ ಖುದ್'ವತುಸ್ಸದಾತ್ ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಸಮಾರಂಭ ಉದ್ಘಾಟಿಸಿದರು. ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಜೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಳ್‍ಹರ್ ಸಿಲ್ವರ್ ಜುಬಿಲಿ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಶಾಸಕ ಎ.ಕೆ.ಎಂ ಅಶ್ರಫ್ ಕುಂಬೋಳ್ ತಂಙಳವರಿಗೆ ನೀಡಿ ಬಿಡುಗಡೆಗೊಳಿಸಿದರು. ಅಬ್ದುಲ್ ರಶೀದ್ ಸಖಾಫಿ ಕಕ್ಕಿಂಜೆ ಮುಖ್ಯ ಭಾಷಣ ಮಾಡಿದರು.
ಸೈಯದ್ ಅತಾವುಲ್ಲಾ ತಂಙಳ್ ಉದ್ಯಾವರ, ಸೈಯದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ, ಸೈಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಸೇರಿದಂತೆ ಹಲವು ಮಂದಿ ಮುಖಂಡರು ಭಾಗವಹಿಸಿದ್ದರು. ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ ಸ್ವಾಗತಿಸಿದರು.
ಜೂ. 21ರಂದು ಬೆಳಗ್ಗೆ 10ಕ್ಕೆ ಮಳ್‍ಹರೀಸ್ ಮೀಟ್ ಹಾಗೂ 11ಕ್ಕೆ ಸ್ಥಾನವಸ್ತ್ರ ವಿತರಣೆ, ಮಧ್ಯಾಹ್ನ 2ಕ್ಕೆ ಆಂದೋಲನ ಸಮ್ಮೇಳನ ನಡೆಯಲಿದೆ.
ಸಂಜೆ 7 ಗಂಟೆಗೆ ನಡೆಯುವ ಪದವಿಪ್ರದಾನ ಸಮ್ಮೇಳನವನ್ನು ಸಮಸ್ತ ಅಧ್ಯಕ್ಷ ರಯೀಸುಲ್ ಉಲಮಾ ಇ.ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸುವರು. ಇಂಡ್ಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಪದವಿಪ್ರದಾನ ಭಾಷಣ ಮಾಡುವರು.





