HEALTH TIPS

ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ: ಪ್ರಧಾನಿ ನೆತನ್ಯಾಹು ಬೇರೆಡೆಗೆ ಸ್ಥಳಾಂತರ; ಅಮೆರಿಕ, ಯುಕೆ, ಫ್ರಾನ್ಸ್ ಗೂ ಬೆದರಿಕೆ ಹಾಕಿದ ಇರಾನ್!

ಟ್ರೆಹಾನ್: ಇಸ್ರೇಲ್ ಮೇಲಿನ ತನ್ನ ಪ್ರತೀಕಾರದ ದಾಳಿ ಹಿಮ್ಮೆಟ್ಟಿಸುವಲ್ಲಿ ನೆರವಾದರೆ ಮೂರು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಾದ ಅಮೆರಿಕ ಫ್ರಾನ್ಸ್‌ನ ಪ್ರಾದೇಶಿಕ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಬೆದರಿಕೆ ಹಾಕಿದೆ.

ಇಸ್ರೇಲ್ ಮೇಲಿನ ಇರಾನಿನ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ತೊಡಗಿಸಿಕೊಳ್ಳುವ ಯಾವುದೇ ದೇಶವು ಪರ್ಷಿಯನ್ ಗಲ್ಫ್ ದೇಶಗಳಲ್ಲಿನ ಮಿಲಿಟರಿ ನೆಲೆಗಳು, ಪರ್ಷಿಯನ್ ಗಲ್ಫ್ ಮತ್ತು ಕೆಂಪು ಸಮುದ್ರದಲ್ಲಿನ ಹಡಗುಗಳು ಮತ್ತು ನೌಕಾ ಹಡಗುಗಳು ಸೇರಿದಂತೆ ಎಲ್ಲಾ ಪ್ರಾದೇಶಿಕ ವಾಯುನೆಲೆಗಳನ್ನು ಗುರಿಯನ್ನಾಗಿಸಿಕೊಳ್ಳಲಾಗುವುದು ಎಂಬ ಸರ್ಕಾರಿ ಹೇಳಿಕೆಯನ್ನು ಉಲ್ಲೇಖಿಸಿ ಇರಾನ್ ನ ಮೆಹರ್ ನ್ಯೂಸ್ ಎಜೆನ್ಸಿ ವರದಿ ಮಾಡಿದೆ.

ಟೆಹ್ರಾನ್‌ನ ಪರಮಾಣು ಸೌಕರ್ಯಗಳು ಮತ್ತು ಮಿಲಿಟರಿ ಕಟ್ಟಡಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 20 ಮಕ್ಕಳು ಸೇರಿದಂತೆ ಕನಿಷ್ಠ 78 ಜನರು ಸಾವನ್ನಪ್ಪಿದ್ದ ನಂತರ ಇರಾನ್ ಶನಿವಾರ ಪ್ರತೀಕಾರವಾಗಿ ಕ್ಷಿಪಣಿ ದಾಳಿ ನಡೆಸಿದ್ದು, ಮೂವರು ಇಸ್ರೇಲಿ ನಾಗರಿಕರು ಹತ್ಯೆಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್ ದಾಳಿ ಹಿಂದಿರುವವರು ಸುಲಭವಾಗಿ ತಮ್ಮ ಬಹು ದೊಡ್ಡ ಅಪರಾಧದಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಬಿಡಲ್ಲ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶುಕ್ರವಾರ ಹೇಳಿದ್ದರು.

ಇರಾನ್ ಮೇಲೆ ಇನ್ನಷ್ಟು ದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದೆ. ಮುಂದಿನ ಸೂಚನೆ ಬರುವವರೆಗೂ ಇಸ್ರೇಲ್‌ನ ಬೆನ್ ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಎಎಫ್‌ಪಿ ಶನಿವಾರ ವರದಿ ಮಾಡಿದೆ. ವಿಮಾನ ನಿಲ್ದಾಣವನ್ನು ಮತ್ತೆ ತೆರೆಯಲು ಯಾವುದೇ ದಿನಾಂಕ ಅಥವಾ ದಿನವನ್ನು ನಿಗದಿಪಡಿಸಲಾಗಿಲ್ಲ" ಎಂದು ವಿಮಾನ ನಿಲ್ದಾಣದ ವಕ್ತಾರ ಲಿಸಾ ಡೈವರ್ ಹೇಳಿದ್ದಾರೆ.

ಪ್ರತೀಕಾರದ ದಾಳಿಗೆ ಹೆದರಿದ ಬೆಂಜಮಿನ್ ನೆತನ್ಯಾಹು: ಈ ಮಧ್ಯೆ ಇರಾನ್‌ನ ಪ್ರತೀಕಾರದ ದಾಳಿಗೆ ಹೆದರಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಗ್ರೀಸ್‌ ಆಕ್ರಮಿತ ಪ್ರದೇಶಗಳ ಹೊರಗೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅನೇಕ ಮಾಧ್ಯಮ ವರದಿಗಳು ಹೇಳಿವೆ.

ನೆತನ್ಯಾಹು ಮತ್ತು ಇಸ್ರೇಲಿ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಗೆ ಅಂತಾರಾಷ್ಟ್ರೀಯ ಭೇಟಿಯ ವೇಳೆ ಸೇವೆ ಸಲ್ಲಿಸುವ 'ವಿಂಗ್ ಆಫ್ ಜಿಯಾನ್' ವಿಮಾನವು ಇರಾನ್ ಪ್ರತೀಕಾರದ ದಾಳಿಯ ಭಯದ ನಡುವೆ ಶುಕ್ರವಾರ ಬೆಳಿಗ್ಗೆ ಅಥೆನ್ಸ್‌ಗೆ ತೆರಳಿದೆ ಎಂದು ಜೆರುಸಲೆಮ್ ಪೋಸ್ಟ್ ಶುಕ್ರವಾರ ವರದಿ ಮಾಡಿದೆ.

ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಅತ್ಯುನ್ನತ ಶ್ರೇಣಿಯ ಮಿಲಿಟರಿ ಅಧಿಕಾರಿ, ಸಶಸ್ತ್ರ ಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಮತ್ತು ರೆವಲ್ಯೂಷನರಿ ಗಾರ್ಡ್‌ನ ಮುಖ್ಯಸ್ಥ ಹೊಸೈನ್ ಸಲಾಮಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ದೇಶದ ಮಾಧ್ಯಮಗಳು ವರದಿ ಮಾಡಿದೆ.

ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆ ಕಾರ್ಯದರ್ಶಿ ಒತ್ತಾಯ: ಇರಾನ್ ಮತ್ತು ಇಸ್ರೇಲ್ ನಡುವಣ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆಯೇ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಜಾರಿಗಾಗಿ ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ. ಅನೇಕ ರಾಷ್ಟ್ರಗಳು ಇಸ್ರೇಲ್ ದಾಳಿಯನ್ನು ಖಂಡಿಸಿದ್ದು, ಉಭಯ ರಾಷ್ಟ್ರಗಳ ನಡುವೆ ಕೂಡಲೇ ಕದನ ವಿರಾಮ ಜಾರಿಗಾಗಿ ವಿಶ್ವದ ಅನೇಕ ನಾಯಕರು ಕರೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries