ಭುವನೇಶ್ವರ: ಒಡಿಶಾದ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಎರಡು ಪ್ರತ್ಯೇಕ ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮತ್ತು ಮಹಾರಾಷ್ಟ್ರದಿಂದ ಒಟ್ಟು ಮೂವರನ್ನು ಬಂಧಿಸಿದ್ದಾರೆ.
₹6 ಕೋಟಿ ವಂಚನೆಗೆ ಸಂಬಂಧಿಸಿ ಮಹಾರಾಷ್ಟ್ರದಿಂದ ಸ್ವಪ್ನಿಲ್ ಗೋರಕ್ಷಾ ಧೋಖಲೆ, ಅಜಾಜ್ ಶಫೀಕ್ ಹಾಗೂ ₹1 ಕೋಟಿ ವಂಚನೆಗೆ ಸಂಬಂಧಿಸಿ ಬೆಂಗಳೂರಿನಿಂದ ಗಣೇಶ್ ಕೆ.ಶೆಟ್ಟಿ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.




