ಕಣ್ಣೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯಿಂದಾಗಿ ದುಬೈ ವಾಯುಪ್ರದೇಶವನ್ನು ಮುಚ್ಚಿದ ನಂತರ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರು ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನಗಳನ್ನು ರದ್ದುಪಡಿಸಲಾಗಿದೆ.
ಕೊಚ್ಚಿ, ಕರಿಪ್ಪೂರ್ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಿಂದ ವಿಮಾನಗಳನ್ನು ರದ್ದುಪಡಿಸಲಾಗಿದೆ. ಅಬುಧಾಬಿ ಮತ್ತು ತಿರುವನಂತಪುರಂ ನಡುವಿನ ಎರಡು ವಿಮಾನಗಳು ಮತ್ತು ಶಾರ್ಜಾ ಮತ್ತು ಕೋಝಿಕೋಡ್ ನಡುವಿನ ಎರಡು ವಿಮಾನಗಳನ್ನು ಮಂಗಳವಾರ ರದ್ದುಪಡಿಸಲಾಗಿದೆ.
ಬುಧವಾರ ಕಣ್ಣೂರಿನಿಂದ ಆರು ವಿಮಾನಗಳನ್ನು ರದ್ದುಪಡಿಸಲಾಗಿದೆ. ಕೋಝಿಕೋಡ್, ಕೊಚ್ಚಿ ಮತ್ತು ತಿರುವನಂತಪುರಂನಿಂದ ತಲಾ ನಾಲ್ಕು ವಿಮಾನಗಳನ್ನು ರದ್ದುಪಡಿಸಲಾಗಿದೆ.
ಹಲವಾರು ವಿಮಾನಗಳು ಸಹ ವಿಳಂಬವಾಗಿವೆ. ಇರಾನ್, ಇರಾಕ್ ಮತ್ತು ಸಿರಿಯಾದಲ್ಲಿ ವಾಯುಪ್ರದೇಶ ನಿಬರ್ಂಧಗಳಿಂದಾಗಿ ವಿಮಾನಗಳು ವಿಳಂಬವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದರು. ಇಸ್ರೇಲ್-ಇರಾನ್ ಸಂಘರ್ಷ ಮುಂದುವರಿದಂತೆ ಟಿಕೆಟ್ ಬೆಲೆಗಳು ಗಗನಕ್ಕೇರಿವೆ.





