ತಿರುವನಂತಪುರಂ: ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ವಿಶೇಷ ಕರ್ತವ್ಯ ಅಧಿಕಾರಿ (ಒ.ಎಸ್.ಡಿ)ಯಾಗಿ ಹರಿ ಎಸ್.ಕರ್ತಾ ಅವರನ್ನು ನೇಮಿಸಲಾಗಿದೆ. ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ.
ಆರಿಫ್ ಮೊಹಮ್ಮದ್ ಖಾನ್ ಅವರು ರಾಜ್ಯಪಾಲರಾಗಿದ್ದಾಗ ಅವರು ರಾಜ್ಯಪಾಲರ ಹೆಚ್ಚುವರಿ ಪಿಎ ಆಗಿದ್ದರು. ಜನ್ಮಭೂಮಿಯ ಮುಖ್ಯ ಸಂಪಾದಕರಾಗಿ, ಎಕನಾಮಿಕ್ ಟೈಮ್ಸ್ ಮತ್ತು ಫೈನಾನ್ಷಿಯಲ್ ಎಕ್ಸ್‍ಪ್ರೆಸ್‍ನ ಬ್ಯೂರೋ ಮುಖ್ಯಸ್ಥರಾಗಿ, ರಾಯಿಟರ್ಸ್ ಮತ್ತು ಗಲ್ಫ್ ನ್ಯೂಸ್‍ನ ವರದಿಗಾರರಾಗಿ ಮತ್ತು ಅಮೃತ ಟಿವಿಯ ಮಾಜಿ ಸಂಪಾದಕರಾಗಿ ಅವರು ನಾಲ್ಕು ದಶಕಗಳಿಂದ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.






