ತಿರುವನಂತಪುರಂ: ರಾಜ್ಯದ ಐದು ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪತ್ತನಂತಿಟ್ಟದ ಮೂಜಿಯಾರ್, ಪೆÇನ್ಮುಡಿ, ಕಲ್ಲರ್ಕುಟ್ಟಿ, ಇಟ್ಟಯಾರ್ ಮತ್ತು ಇಡುಕ್ಕಿಯ ಲೋವರ್ ಪೆರಿಯಾರ್ ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ನದಿಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯ ಉಪ್ಪಳ, ನೀಲೇಶ್ವರ ಮತ್ತು ಮೊಗ್ರಾಲ್, ಕೋಯಿಕ್ಕೋಡ್‍ನ ಕೋರಪ್ಪುಳ ಮತ್ತು ಪತ್ತನಂತಿಟ್ಟದ ಮಣಿಮಾಲ ನದಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಹತ್ತು ಕ್ಕೂ ಹೆಚ್ಚು ನದಿಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೇರಳ ಕರಾವಳಿಯಲ್ಲಿ ಪಶ್ಚಿಮ ದಿಕ್ಕಿನ ಗಾಳಿ ಬಲವಾಗಿ ಬೀಸುತ್ತಿರುವುದರಿಂದ, ಗುಡ್ಡಗಾಡು ಕರಾವಳಿ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಗುಜರಾತ್ ಮತ್ತು ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಸರಣವು ತೀವ್ರಗೊಂಡು, ವಾಯುಭಾರ ಕುಸಿತಗೊಳ್ಳುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.





