ತಿರುವನಂತಪುರಂ: ನಟ ಮತ್ತು ಬಿಜೆಪಿ ನಾಯಕ ಜಿ. ಕೃಷ್ಣಕುಮಾರ್ ಅವರ ಪುತ್ರಿ ದಿಯಾ ಅವರ ಅಂಗಡಿಯಿಂದ ಹಣ ದುರುಪಯೋಗ ಪ್ರಕರಣವನ್ನು ಅಪರಾಧ ವಿಭಾಗ ತನಿಖೆ ನಡೆಸಲಿದೆ.
ಅಪರಾಧ ವಿಭಾಗದ ಡಿವೈಎಸ್ಪಿ ಡಿ.ಕೆ. ಪೃಥ್ವಿರಾಜ್ ನೇತೃತ್ವದ ತಂಡವು ಹೆಚ್ಚಿನ ತನಿಖೆ ನಡೆಸಲಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಮ್ಯೂಸಿಯಂ ಪೋಲೀಸರಿಂದ ಅಪರಾಧ ವಿಭಾಗವು ಕಡತಗಳನ್ನು ಪಡೆದುಕೊಂಡಿದೆ.
ದಿಯಾ ಅವರ ಸಂಸ್ಥೆಯಿಂದ ನೌಕರರು 69 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣವನ್ನು ಅಪರಾಧ ವಿಭಾಗ ತನಿಖೆ ನಡೆಸುತ್ತಿದೆ. ದಿಯಾ ದೂರು ನೀಡಿದ ನಂತರ, ಮೂವರು ಆರೋಪಿ ನೌಕರರು ತಲೆಮರೆಸಿಕೊಂಡಿದ್ದಾರೆ.
ಕೃಷ್ಣಕುಮಾರ್ ಕೂಡ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದರು. ಇದರ ನಂತರ, ರಾಜ್ಯ ಪೋಲೀಸ್ ಮುಖ್ಯಸ್ಥರು ಗುರುವಾರ ಆದೇಶ ಹೊರಡಿಸಿ, ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ. ತಿರುವನಂತಪುರಂ ಪ್ರಧಾನ ಸೆಷನ್ಸ್ ನ್ಯಾಯಾಲಯವು ಸೋಮವಾರ ಆರೋಪಿಗಳ ಜಾಮೀನು ಅರ್ಜಿಯನ್ನು ಪರಿಗಣಿಸಲಿದೆ. ಉದ್ಯೋಗಿಗಳಾದ ವಿನಿತಾ, ದಿವ್ಯಾ ಮತ್ತು ರಾಧಾಕುಮಾರಿ ಅವರು ಕಂಪನಿಯ ಕಿಖ ಕೋಡ್ ಬದಲಿಗೆ ತಮ್ಮದೇ ಖಾತೆಯ ಕಿಖ ಕೋಡ್‍ಗಳು ಮತ್ತು ಉoogಟe Pಚಿಥಿ ಸಂಖ್ಯೆಗಳನ್ನು ನಮೂದಿಸಿ 69 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಕೃಷ್ಣಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಮಹಿಳಾ ಉದ್ಯೋಗಿಗಳು ಸಲ್ಲಿಸಿರುವ ದೂರಿನಲ್ಲಿ ಅಪಹರಣದ ಆರೋಪವೂ ಸೇರಿದೆ. ಈ ದೂರು ಕೂಡ ಅದೇ ದಿನ ನ್ಯಾಯಾಲಯದ ಪರಿಗಣನೆಗೆ ಬರಲಿದೆ.





