ಕುಂಬಳೆ: ಮುಜುಂಗಾವು ಶ್ರೀ ಭಾರತಿ ವಿದ್ಯಾಪೀಠದಲ್ಲಿ ಯೋಗ ದಿನಾಚರಣೆಯನ್ನು ಪ್ರಾಣಾಯಾಮ, ಯೋಗಾಸನ ಪ್ರದರ್ಶನದ ಮೂಲಕ ನಡೆಸಲಾಯಿತು. ಯೋಗದಿಂದ ರೋಗ ದೂರ. ಯಾವುದೇ ಭಂಗಿಯಲ್ಲಿ ನಾವಿದ್ದರೂ ಅಲ್ಲಿ ಸ್ಥಿರತೆ ಇದ್ದರೆ ಮಾತ್ರ ಅದನ್ನು ಆಸನ ಎಂದು ಹೇಳಬಹುದು. ಉಸಿರಾಟವು ಸಮತೋಲನದಲ್ಲಿರಲು ಪ್ರಾಣಾಯಾಮ ಅತಿ ಅಗತ್ಯ. ವಿದ್ಯಾರ್ಥಿಗಳ ಏಕಾಗ್ರತೆಗೆ ಯೋಗವು ಅತ್ಯಂತ ಸಹಕಾರಿ ಎಂದು ಅತಿಥಿಗಳಾಗಿ ಆಗಮಿಸಿದ ೀ ಶಂಕರ ನಾರಾಯಣ ಭಟ್ ಹೊಸಮನೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಿವಿಮಾತು ಹೇಳಿದರು.
ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್.ಎಸ್ ಪ್ರಸಾದ್, ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ದರ್ಭೆಮಾರ್ಗ, ಸಹ ಮುಖ್ಯ ಶಿಕ್ಷಕಿ ಚಿತ್ರಾ ಸರಸ್ವತಿ ಉಪಸ್ಥಿತರಿದ್ದರು.ಯೋಗ ಅಧ್ಯಾಪಿಕೆ ಡಾ.ಸ್ನೇಹ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಶಿಕ್ಷಕಿ ವಿದ್ಯಾಲಕ್ಷ್ಮಿ ಕಾರ್ಯಕ್ರಮ ನಡೆಸಿಕೊಟ್ಟರು.




.jpg)
.jpg)
