ಮುಳ್ಳೇರಿಯ: ಪಾಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿಯ ಸಹಾಯದೊಂದಿಗೆ ಹಳೆಯ ಕಟ್ಟಡವನ್ನು ನವೀಕರಿಸಿ ಭೋಜನ ಶಾಲೆ ಮತ್ತು ಶುದ್ಧವಾದ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಎಸ್.ಎನ್. ಉದ್ಘಾಟಿಸಿದರು.
ಸಾರ್ವಜನಿಕ ಶಾಲೆಗಳು ಹಿರಿಮೆಯ ಕೇಂದ್ರಗಳಾಗಿವೆ ಹಾಗು ಸಾರ್ವಜನಿಕ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಶಾಲೆಗಳಲ್ಲಿ ದಿನದಿಂದ ದಿನಕ್ಕೆ ಸೌಕರ್ಯಗಳನ್ನು ಹೆಚ್ಚುಮಾಡುವ ಭಾಗವಾಗಿ ಗಡಿನಾಡಿನ ಪಾಂಡಿ ಶಾಲೆಗೆ ಜಿಲ್ಲಾ ಪಂಚಾಯತಿ ಹೆಚ್ಚಿನ ಪರಿಗಣನೆ ನೀಡಲಾಗಿದೆ ಎಂದು ಉದ್ಘಾಟಕರು ತಿಳಿಸಿದರು.
ದೇಲಂಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಎ.ಪಿ.ಉಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹೊಸ ಅಧ್ಯಯನ ವರ್ಷದಲ್ಲಿ ಶಾಲೆಗೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗಲಿ ಎಂದೂ ಮಳೆಗಾಲದಲ್ಲಿ ಗಮನಿಸಬೇಕಾದ ಸುರಕ್ಷಾ ಕಾರ್ಯಗಳ ಬಗ್ಗೆಯೂ ಅವರು ಸೂಚನೆ ನೀಡಿದರು.
ದೇಲಂಪಾಡಿ ಗ್ರಾಮ ಪಂಚಾಯತಿ ಸದಸ್ಯ ಟಿ.ಕೆ.ದಾಮೋದರನ್ ಶುಭ ಹಾರೈಸಿದರು. ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ, ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ಯಾಮಲ ಬಿ, ಎಸ್.ಎಂ.ಸಿ. ಅಧ್ಯಕ್ಷ ದಿವಾಕರನ್, ನೌಕರ ಸಂಘದ ಕಾರ್ಯದರ್ಶಿ ಆನಂದ ಎಸ್. ಉಪಸ್ಥಿತರಿದ್ದರು. ಶಾಲೆಯ ಪ್ರಭಾರ ಪ್ರಾಂಶುಪಾಲ ಮುರಳೀಧರನ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ದಿವ್ಯಗಂಗಾ ಪಿ. ವಂದಿಸಿದರು. ಅಧ್ಯಾಪಕರಾದ ಅನೀಶ್ ಟಿ.ಆರ್. ಕಾರ್ಯಕ್ರಮ ನಿರೂಪಿಸಿದರು.




.jpg)

