ಮೊಸರು ಪ್ರಿಯರೇ ಹುಷಾರ್! ಈ 4 ತರಕಾರಿ ಮತ್ತು ಆಹಾರ ಜೊತೆಗೆ ಮೊಸರು ತಿನ್ನಲೇಬೇಡಿ. ತಪ್ಪಾಗಿ ಕೂಡ.. ಇದು ವಿಷಕ್ಕೆ ಸಮಾನ. ಹೌದು, ಮೊಸರು (curd) ದೇಹವನ್ನು ತಂಪಾಗಿಡುತ್ತದೆ. ನಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೌದು, ಮೊಸರು ಒಂದು ಪ್ರೋಬಯೋಟಿಕ್ ಆಹಾರ ಪದಾರ್ಥ. ಅಷ್ಟೇ ಅಲ್ಲದೆ, ಡೈರಿ ಉತ್ಪನ್ನವೂ ಆಗಿದೆ. ನಾವು ದಿನ ನಿತ್ಯದ ಬಳಕೆಯಲ್ಲಿ ಒಂದಲ್ಲ ಒಂದು ರೂಪದಲ್ಲಿ ಡೈರಿ ಉತ್ಪನ್ನಗಳನ್ನು ಖಂಡಿ ಬಳಸುತ್ತೇವೆ. ಆದರೆ, ಮೊಸರನ್ನು ಕೆಲವು ಆಹಾರ (Food) ಮತ್ತು ತರಕಾರಿಗಳೊಂದಿಗೆ (vegetables) ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ, ನೀವು ಕೆಲವು ಸಲಹೆಗಳನ್ನು ಅನುಸರಿಸಬೇಕು.
ಈರುಳ್ಳಿ, ಬೆಂಡೆಕಾಯಿ, ಸೌತೆಕಾಯಿ ಮತ್ತು ಹಾಗಲಕಾಯಿ ಸೇರಿದಂತೆ ಕೆಲವು ತರಕಾರಿಗಳೊಂದಿಗೆ ಮೊಸರು ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ. ಈ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸಲು, ಸ್ನಾಯುಗಳನ್ನು ನಿರ್ಮಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಆಯುರ್ವೇದವು ಕೆಲವು ತರಕಾರಿಗಳೊಂದಿಗೆ ಮೊಸರು ತಿನ್ನಬಾರದು ಎಂದು ಸಲಹೆ ನೀಡುತ್ತದೆ. ಕೆಲವು ತರಕಾರಿಗಳೊಂದಿಗೆ ಮೊಸರನ್ನು ಬೆರೆಸುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಿದ್ರೆ, ಈ ತರಕಾರಿಗಳೊಂದಿಗೆ ಮೊಸರು ತಿನ್ನುವುದು ಆರೋಗ್ಯಕ್ಕೆ ಏಕೆ ಹಾನಿಕಾರಕ? ಎಂಬುವುದನ್ನು ತಿಳಿಯೋಣ ಬನ್ನಿ.
ಮೊಸರು ಮತ್ತು ಈರುಳ್ಳಿ
ಮೊಸರು ತಂಪಾಗಿರುತ್ತದೆ ಮತ್ತು ಈರುಳ್ಳಿ ಬಿಸಿಯಾಗಿರುತ್ತದೆ. ಇದು ದೇಹದ ಸಮತೋಲನವನ್ನು ಹಾಳು ಮಾಡುತ್ತದೆ. ಇದಲ್ಲದೆ ಜೀರ್ಣಕ್ರಿಯೆಯ ಸಮಸ್ಯೆಗಳು ಮತ್ತು ತುರಿಕೆ ಅಥವಾ ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮುಖದ ಮೇಲೆ ದದ್ದು, ಸೋರಿಯಾಸಿಸ್, ಇಸುಬು ಮತ್ತು ಇತ್ಯಾದಿ ಚರ್ಮದ ಅಲರ್ಜಿ ಉಂಟಾಗುವ ಸಾಧ್ಯತೆಯಿದೆ.
ಮೊಸರು ಮತ್ತು ಬೆಂಡೆಕಾಯಿ
ಮೊಸರು ಮತ್ತು ಬೆಂಡೆಕಾಯಿ ಎರಡೂ ಸಹ ದೇಹವನ್ನು ತಂಪಾಗಿಸುತ್ತವೆ. ಹಾಗೆಯೇ ಲೋಳೆಯನ್ನು ಹೆಚ್ಚಿಸುತ್ತವೆ. ಇವುಗಳನ್ನು ಒಟ್ಟಿಗೆ ತಿನ್ನುವುದರಿಂದ ಗ್ಯಾಸ್, ಉಬ್ಬುವುದು ಮತ್ತು ಜೀರ್ಣಕ್ರಿಯೆ ಸರಿಯಾಗಿ ನಡೆಯುವುದಿಲ್ಲ.
ಮೊಸರು ಮತ್ತು ಹಾಗಲಕಾಯಿ
ಹಾಗಲಕಾಯಿ ಖಾರವಾದ ತರಕಾರಿ ಮತ್ತು ಹುಳಿಯಿಂದ ಕೂಡಿದೆ. ಮೊಸರು ಕಫವನ್ನು ಹೆಚ್ಚಿಸುತ್ತದೆ. ಇವುಗಳ ವಿರುದ್ಧ ಗುಣಗಳು ದೇಹದಲ್ಲಿ ಆಂತರಿಕ ಸಮತೋಲನ ಮತ್ತು ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತವೆ. ಇದು ವಿಷಕಾರಿ ವಸ್ತುಗಳ ಉತ್ಪಾದನೆಗೆ ಕಾರಣವಾಗಬಹುದು. ಹೀಗಾಗಿ, ಮೊಸರು ಆರೋಗ್ಯಕ್ಕೆ ಒಳ್ಳೆಯದಾಗಿದ್ದೂ, ಅದನ್ನು ಈ ರೀತಿಯ ತರಕಾರಿಗಳೊಂದಿಗೆ ಬೆರೆಸುವುದು ಹಾನಿಕಾರಕ. ಆಯುರ್ವೇದ ಮಾರ್ಗಸೂಚಿಗಳನ್ನು ಅನುಸರಿಸಿ, ಸರಿಯಾದ ರೀತಿಯಲ್ಲಿ ಮೊಸರನ್ನು ಸೇವಿಸಬೇಕು.
ಮೊಸರು ಮತ್ತು ಸೌತೆಕಾಯಿ
ಮೊಸರು ಮತ್ತು ಸೌತೆಕಾಯಿ ಎರಡೂ ಸಹ ತಂಪಾಗಿಸುವ ಗುಣ ಹೊಂದಿವೆ. ಆದರೂ, ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಋತುಮಾನದ ಜ್ವರ ಬರಬಹುದು ಎಂದು ತಜ್ಞರು ಹೇಳುತ್ತದೆ. ಈ ಸಂಯೋಜನೆಯು ದೇಹದ ಉಷ್ಣತೆಯ ಸಮತೋಲನವನ್ನು ಅಡ್ಡಿಪಡಿಸುತ್ತದೆ.
ಮೊಸರು ಮತ್ತು ಮೀನು
ಮೀನಿನ ಜೊತೆಗೆ ಯಾವುದೇ ಕಾರಣಕ್ಕೂ ಮೊಸರನ್ನು ಬೆರೆಸಬಾರದು ಮತ್ತು ಸೇವನೆ ಮಾಡಬಾರದು. ಮೊಸರು ಮತ್ತು ಮೀನು ಪ್ರೋಟೀನ್ ಅಂಶದಲ್ಲಿ ತುಂಬಾ ಹೆಚ್ಚಿನ ಪ್ರಭಾವ ಹೊಂದಿದೆ. ಆರೋಗ್ಯ ತಜ್ಞರ ಪ್ರಕಾರ, ಮೀನು ಮತ್ತು ಮೊಸರು ಒಟ್ಟಿಗೆ ಸೇವನೆ ಮಾಡಬಾರದು. ಕಾರಣ, ಒಂದು ಸಸ್ಯಹಾರ ಪ್ರೋಟಿನ್ ಮತ್ತು ಮಾಂಸಾಹಾರ ಪ್ರೋಟೀನ್ ಜೊತೆಯಾದರೆ ಅದರಿಂದ ಅಜೀರ್ಣತೆ ಉಂಟಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂಬುವುದು ವೈದ್ಯರ ಎಚ್ಚರಿಕೆ.
ಮೊಸರು ಮತ್ತು ಉದ್ದಿನ ಬೇಳೆ
ಮೊಸರು ಮತ್ತು ಉದ್ದಿನ ಬೇಳೆ ಸಹ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಅಜೀರ್ಣತೆ, ಹೊಟ್ಟೆ ಉಬ್ಬರ, ಎದೆಯುರಿ, ವಾಂತಿ ಭೇದಿ ಸಹ ಉಂಟಾಗುತ್ತದೆ.
ಮೊಸರು ಮತ್ತು ಕರಿದ ಪದಾರ್ಥಗಳು
ಮೊಸರು ಮತ್ತು ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳ ಸೇವನೆ ಬೇಡ. ಅಡುಗೆ ಎಣ್ಣೆ, ಬೆಣ್ಣೆ ಮತ್ತು ತುಪ್ಪ ಜಿಡ್ಡು ಹೊಂದಿದ ಆಹಾರ ಪದಾರ್ಥಗಳು. ಇವುಗಳನ್ನು ಮೊಸರಿನ ಜೊತೆಗೆ ಬೆರೆಸಬಾರದು ಮತ್ತು ತಿನ್ನಬಾರದು. ಇದರಿಂದ ದೈಹಿಕ ಆಲಸ್ಯ ಉಂಟಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



