ಕಾಸರಗೋಡು: ಚುಟುಕು ಸಾಹಿತ್ಯ ಪರಿಷತ್ತಿನ ಅಂತಾರಾಜ್ಯ ಐದನೆಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾಸರಗೋಡಿನ ಹಿರಿಯ ಚಿಂತಕ ವಿ.ಬಿ.ಕುಳಮರ್ವ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ಜೂನ್ 29 ಬೆಳಿಗ್ಗೆ 10ಕ್ಕೆ ಕಾಸರಗೋಡಿನ ವೆಂಕಪ್ಪಯ್ಯ ಕಲಾ ಗ್ಯಾಲರಿ ಸಭಾಂಗಣದಲ್ಲಿ ಸಮ್ಮೇಳನ ಜರುಗಲಿದೆ, ವಿಚಾರ ಗೋಷ್ಟಿ,ಕವಿ ಗೋಷ್ಟಿ, ಪ್ರತಿಭಾ ಪುರಸ್ಕಾರ, ನೃತ್ಯ-ಸಂಗೀತ ವೈಭವ ಏರ್ಪಡಿಸಲಾಗಿದೆ ಎಂದು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



