ಕೋಝಿಕ್ಕೋಡ್: ಕನ್ಣೂರಿನಿಂದ 44 ನಾಟಿಕಲ್ ಮೈಲು(81.4ಕಿ.ಮೀ)ದೂರದ ಆಳಸಮುದ್ರದಲ್ಲಿ ಬೆಂಕಿತಗುಲಿರುವ ಸರಕು ಸಾಗಾಟದ 'ವಾನ್ ಹಾಯ್-503' ಹೆಸರಿನ ಹಡಗಿನಲ್ಲಿ ಭಾರಿ ಪ್ರಮಾಣದ ರಾಸಾಯನಿಕ ಒಳಗೊಂಡಿದ್ದು, ಇದಕ್ಕೆ ಬೆಂಕಿ ವ್ಯಾಪಿಸಿದಲ್ಲಿ ಭಾರೀ ಪರಿಸರ ಹಾನಿಗೆ ಕರಣವಾಗಲಿರುವುದಾಗಿ ತಜ್ಞರು ತಿಳಿಸಿದ್ದಾರೆ.
ಹಡಗಿನ ಬೆಂಕಿ ಶಮನಗೊಳಿಸುವ ಪ್ರಯತ್ನ ಮುಂದುವರಿಯುತ್ತಿದ್ದು, ಬೆಂಕಿನಂದಿಸಲು ಬಳಸುವ ನೀರು ಹಡಗಿನಲ್ಲಿರುವ ರಾಸಾಯನಿಕ ಫಾರ್ಮಲ್‍ಡಿಹೈಡ್‍ನೊಂದಿಗೆ ಸೇರ್ಪಡೆಗೊಂಡು ಮಲಿನಜಲ ಸಮುದ್ರಕ್ಕೆ ಸೇರ್ಪಡೆಯಾಗುವ ಭೀತಿಯೂ ಎದುರಾಗಿದೆ.
ತೈಲ ಹಾಗೂ ರಸಾಯನಿಕ ಸಮುದ್ರಕ್ಕೆ ಸೇರ್ಪಡೆಗೊಳ್ಳುವುದನ್ನು ತಡೆಗಟ್ಟಲು ಕರಾವಳಿರಕ್ಷಣಾ ಪಡೆಯ 'ಸಮುದ್ರರ ಪ್ರಹಾರಿ'ಎಂಬ ಹಡಗು ಕಾರ್ಯಾಚರಣೆ ಮುಂದುವರಿಸುತ್ತಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳೂ ಈ ಹಡಗಿನಲ್ಲಿದೆ. ಜತೆಗೆ ಹಡಗು ಚೇತಕ್ ಹೆಲಿಕಾಪ್ಟರ್ ಹೊಂದಿದ್ದು, ಇದು ಮಾಲಿನ್ಯ ಪತ್ತೆಹಚ್ಚಲು ಹಾಗೂ ನಿಯಂತ್ರಣಾ ಕಾರ್ಯದಲ್ಲೂ ತೊಡಗಿಸಿಕೊಳ್ಳುತ್ತಿದೆ.





