ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎನ್ ಸಿ ಸಿ ಹಾಗೂ ಎನ್ ಎಸ್ ಎಸ್ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಯೋಗಾಭ್ಯಾಸವನ್ನು ಪ್ರತಿದಿನ ಮಾಡುವದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ನಮಗೆ ದೂರವಿರಬಹುದು ಎಂದರು. ಯೋಗ ವಿಶ್ವಕ್ಕೆ ಭಾರತೀಯರ ಕೊಡುಗೆ ಎಂಬುವುದಕ್ಕೆ ನಾವು ಹೆಮ್ಮೆ ಪಡಬೇಕು ಎಂದರು.
ಎನ್ ಸಿ ಸಿ ಎ. ಎನ್. ಒ ಕ್ಯಾಪ್ಟನ್ ಈಶ್ವರ ನಾಯಕ್ ಸ್ವಾಗತಿಸಿ, ಗೋವಿಂದನ್ ನಂಬೂದಿರಿ ವಂದಿಸಿದರು. ಎನ್ ಸಿ ಸಿ ಹಳೆ ವಿದ್ಯಾರ್ಥಿನಿ,ಕಲಾ ವಿಭಾಗದಲ್ಲಿ ಎಲ್ಲಾ ವಿಷಯದಲ್ಲಿ ಎ ಪ್ಲಸ್ ವಿಜೇತ ವಿದ್ಯಾರ್ಥಿನಿ ಸ್ವರ್ಣ ಲಕ್ಷ್ಮಿ ಜಿ ಶೆಟ್ಟಿ ವಿವಿಧ ಯೋಗಾಸನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.ವಿದ್ಯಾರ್ಥಿಗಳು ಯೋಗಾಭ್ಯಾಸ ನಡೆಸಿದರು. ಎನ್ ಎಸ್ ಎಸ್ ಯೋಜನಾಧಿಕಾರಿ ವಾಣಿ.ಕೆ ನೇತೃತ್ವ ವಹಿಸಿದ್ದರು.




.jpg)
