ನವದೆಹಲಿ: ದೇಶದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಸಂರಕ್ಷಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶ್ರಮಿಸುತ್ತಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರರಾಜಧಾನಿಯಲ್ಲಿರುವ ಆರ್‌ಎಸ್‌ಎಸ್ ಕಚೇರಿಯಲ್ಲಿ ಆಯೋಜಿಸಿದ್ದ 'ಹಿಂದವಿ ಸ್ವರಾಜ್ ಸಂಸ್ಥಾಪಕ ಛತ್ರಪತಿ ಶಿವಾಜಿ' (ಹಿಂದವಿ ಸ್ವರಾಜ್‌ನ ಸ್ಥಾಪಕ ಛತ್ರಪತಿ ಶಿವಾಜಿ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿಂಧಿಯಾ ಮಾತನಾಡಿದ್ದಾರೆ.
ಕೇಂದ್ರ ಸಂವಹನ ಸಚಿವ ಸಿಂಧಿಯಾ, ಛತ್ರಪತಿ ಶಿವಾಜಿ ಮಹಾರಾಜರ ದೇಶಭಕ್ತಿಯ ಆಲೋಚನೆಗಳಿಂದ ಪ್ರೇರಣೆಗೊಂಡಿದ್ದ ಆರ್‌ಎಸ್‌ಎಸ್ ಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್, ಸಂಘಟನೆಯ ಎರಡನೇ ಮುಖ್ಯಸ್ಥ ಎಂ.ಎಸ್. ಗೋಲ್ವಾಲ್ಕರ್ ಹಾಗೂ ಇತರರು, ದೇಶದಲ್ಲಿ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುನ್ನಡೆಯುವಂತೆ ಸಂಘಟನೆಯನ್ನು ಪ್ರೇರೇಪಿಸಿದ್ದರು ಎಂದು ಹೇಳಿದ್ದಾರೆ.
'ಭಾರತ ಮಾತೆಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಂಪರೆಯನ್ನು ರಕ್ಷಿಸುವ ಶಿವಾಜಿ ಮಹಾರಾಜರ ಸಿದ್ಧಾಂತ, ತತ್ವಗಳು ಹಾಗೂ ಅದೇ ಮೌಲ್ಯಗಳು ಆರ್‌ಎಸ್‌ಎಸ್‌ಗೆ ಅಡಿಪಾಯವಾಗಿವೆ' ಎಂದು ಪ್ರತಿಪಾದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದೂ ಹೇಳಿದ ಸಿಂಧಿಯಾ, ಮೋದಿ ಅವರು ಶಿವಾಜಿಯವರ ತತ್ವಗಳ ಮೂಲಕ ರಾಷ್ಟ್ರವನ್ನು ಸ್ವಾವಲಂಬಿಯನ್ನಾಗಿಸಲು ಮುಂದಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಪ್ರಗತಿಗೆ ಕೊಡುಗೆ ನೀಡುವ ಸಮಯ ಇದಾಗಿದೆ ಎನ್ನುವ ಮೂಲಕ, ಜನರನ್ನು ಮುಂದೆ ಬ




