ಕೊಚ್ಚಿ: ಕೇರಳದ ಆರ್ಥಿಕ ಸ್ಥಿತಿ ಅಷ್ಟು ಸ್ಥಿರವಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು. ಎಲ್ಲವೂ ಬಯಸಿದಂತೆ ಪೂರ್ಣಗೊಂಡಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಪೆÇಲೀಸ್ ಠಾಣೆಯಾಗಿ ನಿರ್ಮಿಸಲಾಗುತ್ತಿರುವ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು.
ಠಾಣೆ ನಿರ್ಮಾಣದಲ್ಲಿನ ವಿಳಂಬವನ್ನು ಮುಖ್ಯಮಂತ್ರಿ ಭಾಷಣ ಉಲ್ಲೇಖಿಸುತ್ತಿತ್ತು. ಕೇರಳದಲ್ಲಿ ಪೋಲೀಸರ ಹಸ್ತಕ್ಷೇಪವು ಸಂಘರ್ಷಗಳನ್ನು ತಡೆಯುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ಕೇರಳದಲ್ಲಿ ಗಲಭೆಗಳು ನಡೆಯದಿರಲು ಕಾರಣ ಕೋಮು ಶಕ್ತಿಗಳಿಲ್ಲದಿರುವುದು ಅಲ್ಲ. ಕೇರಳದಲ್ಲಿ ಅಂತಹ ಸಂಘಟನೆಗಳಿಗೆ ಹೆಚ್ಚಿನ ಶಕ್ತಿ ಇದೆ. ಪೋಲೀಸರೊಳಗೆ ಸಮಾಜದ ದುಷ್ಕøತ್ಯಗಳು ಬೇರೂರಿರುವ ಸಾಧ್ಯತೆಯಿದೆ. ಅಂತಹ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಮತ್ತು ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.


