HEALTH TIPS

ಸಾಕ್ಷಿ ಕೊರತೆ: ಅತ್ಯಾಚಾರ ಪ್ರಕರಣದಲ್ಲಿ ನಟ ಜಯಸೂರ್ಯ ಮತ್ತು ಬಾಲಚಂದ್ರ ಮೆನನ್ ವಿರುದ್ಧದ ಪ್ರಕರಣವನ್ನು ಮುಚ್ಚಲಿರುವ ಪೋಲೀಸರು

ತಿರುವನಂತಪುರಂ: ಅತ್ಯಾಚಾರ ಪ್ರಕರಣದಲ್ಲಿ ನಟ ಜಯಸೂರ್ಯ ಮತ್ತು ಬಾಲಚಂದ್ರ ಮೆನನ್ ವಿರುದ್ಧದ ಪ್ರಕರಣದಲ್ಲಿ ಪೋಲೀಸರು ಕಾನೂನು ಕ್ರಮಗಳನ್ನು ಮುಚ್ಚಲು ಸಜ್ಜಾಗಿದ್ದಾರೆ.

ಪ್ರಕರಣಗಳಲ್ಲಿ ನಟರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಪೋಲೀಸರು ಹೇಳುತ್ತಾರೆ. ಸಾಕ್ಷಿಗಳು ದೂರುದಾರರ ವಿರುದ್ಧವೂ ಇದ್ದಾರೆ ಎಂದು ಪೋಲೀಸರು ಸ್ಪಷ್ಟಪಡಿಸುತ್ತಾರೆ. ವಿಶೇಷ ತನಿಖಾ ತಂಡವು ಶೀಘ್ರದಲ್ಲೇ ಇಬ್ಬರನ್ನು ಖುಲಾಸೆಗೊಳಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದೆ.

2008 ರಲ್ಲಿ 'ಡಿ ಇಂಗೋಟ್ ನೋಕಿಯೊ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಜಯಸೂರ್ಯ ಮತ್ತು ಬಾಲಚಂದ್ರ ಮೆನನ್ ಸಂತ್ರಸ್ಥೆಯೋರ್ವೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ದೂರಲಾಗಿತ್ತು. ಸೆಕ್ರೆಟರಿಯೇಟ್‍ನಲ್ಲಿ ಶೌಚಾಲಯಕ್ಕೆ ಹೋಗುವಾಗ ಜಯಸೂರ್ಯ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ನಟಿಯ ದೂರಿನ ಆಧಾರದ ಮೇಲೆ, ಪೋಲೀಸರು ಜಯಸೂರ್ಯ ಮತ್ತು ಬಾಲಚಂದ್ರ ಮೆನನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.


ದೂರಿನಲ್ಲಿ ಉಲ್ಲೇಖಿಸಲಾದ ದಿನದಂದು ಸಚಿವಾಲಯದ ಆವರಣದಲ್ಲಿ ಗುಂಡಿನ ದಾಳಿ ನಡೆದಿದ್ದ ಕಾರಣ ಅಂದು ಕಚೇರಿ ಅಥವಾ ಕೊಠಡಿಗಳಿಗೆ ಪ್ರವೇಶಿಸಲು ಅನುಮತಿ ನೀಡಲಾಗಿಲ್ಲ ಎಂದು ಸರ್ಕಾರಿ ದಾಖಲೆಗಳು ತೋರಿಸುತ್ತವೆ.

ಪರಿಸ್ಥಿತಿಯನ್ನು ಸಾಬೀತುಪಡಿಸಲು ಯಾವುದೇ ಪ್ರತ್ಯಕ್ಷದರ್ಶಿ ಅಥವಾ ಸಾಕ್ಷಿ ಹೇಳಿಕೆ ಇಲ್ಲ. ದೂರುದಾರರ ಗೌಪ್ಯ ಹೇಳಿಕೆ ಮತ್ತು ಆ ಚಿತ್ರದಲ್ಲಿ ಜಯಸೂರ್ಯ ಮತ್ತು ದೂರುದಾರರು ಒಟ್ಟಿಗೆ ನಟಿಸಿದ್ದಾರೆ ಎಂಬ ಅಂಶ ಮಾತ್ರ ಸಕಾರಾತ್ಮಕ ಪುರಾವೆಯಾಗಿದೆ. ಪ್ರಕರಣದಲ್ಲಿ ಬೇರೆ ಯಾವುದೇ ಸಾಕ್ಷಿಗಳಿಲ್ಲದ ಕಾರಣ, ಪೆÇಲೀಸರು ಇದನ್ನು ಕೊನೆಗೊಳಿಸಲು ಯೋಜಿಸುತ್ತಿದ್ದಾರೆ.

ಬಾಲಚಂದ್ರ ಮೆನನ್ ವಿರುದ್ಧದ ದೂರಿನಲ್ಲಿ, ಒಂದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ವಂಚಿಯೂರಿನ ಹೋಟೆಲ್ ಕೋಣೆಗೆ ಅವರನ್ನು ಕರೆಸಿ ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದೆ. ಬಾಲಚಂದ್ರ ಮೆನನ್ ಆ ಹೋಟೆಲ್‍ನಲ್ಲಿ ತಂಗಿದ್ದರು ಎಂದು ಪೆÇಲೀಸರು ಕಂಡುಕೊಂಡಿದ್ದಾರೆ. ಆದಾಗ್ಯೂ, ದೂರುದಾರರು ಅಲ್ಲಿಗೆ ಬಂದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವರ್ಷಗಳು ಕಳೆದರೂ, ಸಿಸಿಟಿವಿ ದೃಶ್ಯಾವಳಿ ಅಥವಾ ಮೊಬೈಲ್ ನಂತಹ ಯಾವುದೇ ಪುರಾವೆಗಳಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries