ಪೆರ್ಲ: ಕಳೆದ ಮಾರ್ಚ್ ತಿಂಗಳ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ 1200 ರಲ್ಲಿ 1200 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಶ್ರೀರಂಜಿನಿ ಎಸ್ ಅವರನ್ನು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಆಡಳಿತ ಮಂಡಳಿಯು ಅಭಿನಂದಿಸಿತು.
ಆಡಳಿತ ಮಂಡಳಿ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್, ಆಡಳಿತ ಮಂಡಳಿ ಸದಸ್ಯರಾದ ಬಿ.ಎಸ್. ಗಾಂಭೀರ್, ಲೋಕನಾಥ ಶೆಟ್ಟಿ, ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ವಿದ್ಯಾರ್ಥಿನಿಯ ತಂದೆ ರಾಮಕೃಷ್ಣ ಎಸ್., ತಾಯಿ ಭುವನೇಶ್ವರಿ ಉಪಸ್ಥಿತರಿದ್ದರು.

.jpg)
