ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ನೇತೃತ್ವದಲ್ಲಿ ಮವ್ವಾರು ಪಕ್ಷದ ಕಛೇರಿಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ಧಾರ್ಮಿಕ ಮುಖಂಡ ರವೀಶ ತಂತ್ರಿ ಕುಂಟಾರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂ ಸಂಘದ ಕಾರ್ಯಕರ್ತ ನಾರಾಯಣ ಮಲ್ಲಮೂಲೆ ನೇತೃತ್ವದಲ್ಲಿ ಯೋಗಾಸನ ನಡೆಯಿತು.
ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಪ್ರಮೋದ್ ಬೆಳಿಂಜ ವಂದಿಸಿದರು. ಮಂಡಲ ಉಪಾಧ್ಯಕ್ಷೆ ನಳಿನಿ ಮಲ್ಲಮೂಲೆ, ಮಂಡಲ ಮಾಜಿ ಅಧ್ಯಕ್ಷ ಹರೀಶ್ ನಾರಂಪಾಡಿ, ಜಿಲ್ಲಾ ಮಾಜಿ ಉಪಾಧ್ಯಕ್ಷ ಸುಧಾಮ ಗೋಸಾಡ, ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್, ಮಂಡಲ ಕಾರ್ಯದರ್ಶಿ ಹರೀಶ್ ಗೋಸಡ ಕೃಷ್ಣಮೂರ್ತಿ ಎಡಪಾಡಿ, ವಿಜಯ ಫಜೀರ್ ತೊಟ್ಟಿ, ಕಾರ್ಯಕರ್ತರು ಭಾಗವಹಿಸಿದ್ದರು.




.jpg)
