ಮುಳ್ಳೇರಿಯ: ಶಾಲೆಗೆ ಶೂ ಧರಿಸಿ ಅಗಮಿಸಿದ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐವರು ಹಿರಿಯ ವಿದ್ಯಾರ್ಥಿಗಳ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದೂರಿನ ಹೈಯರ್ ಸೆಕೆಂಡರಿ ಶಲೆಯಲ್ಲಿ ಘಟನೆ. ಇಲ್ಲಿನ ಪ್ಲಸ್‍ವನ್ ತರಗತಿ ವಿದ್ಯಾರ್ಥಿಯೊಬ್ಬ ನೀಡಿದ ದೂರಿನನ್ವಯ ಐವರು ಪ್ಲಸ್‍ಟು ವಿದ್ಯಾರ್ಥಿಗಳಿಗೆ ಈ ಕೇಸು.
ಶೂ ಧರಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳ ತಂಡ ತಡೆದುನಿಲ್ಲಿಸಿ ಹೀಯಾಳಿಸಿ, ಅಸಭ್ಯವಾಗಿ ನಿಂದಿಸಿರುವುದಲ್ಲದೆ, ಚೆನ್ನಾಗಿ ಥಳಿಸಿತ್ತು. ಬೆಂಚನ್ನು ವಿದ್ಯಾರ್ಥಿಯ ಶರೀರಕ್ಕೆ ಎತ್ತಿಹಾಕಿ ಕ್ರೌರ್ಯ ಮೆರೆದಿತ್ತು. ಅಲ್ಲದೆ ವಿಷಯ ಬಹಿರಂಗಪಡಿಸಿದರೆ, ಕೊಲ್ಲುವುದಾಗಿಯೂ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದಕ್ಕೆ ಸಮಾನ ಪ್ರಕರಣವೊಂದು ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದ್ದು, ಟಿಶರ್ಟ್ ಧರಿಸಿ ಆಗಮಿಸಿದ ಪ್ಲಸ್‍ವನ್ ತರಗತಿ ವಿದ್ಯಾರ್ಥಿ ವಿರುದ್ಧ ಪ್ಲಸ್‍ಟು ವಿದ್ಯಾರ್ಥಿಗಳ ತಂಡವೊಂದು ಹಲ್ಲೆಗೈದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬೇಡಡ್ಕ ಠಾಣೆ ಪೊಲೀಸರು ಕೇಸು ದಆಖಲಿಸಿಕೊಂಡಿದ್ದಾರೆ.

