ಕಾಸರಗೋಡು: ಕೆಎಸ್‍ಆರ್‍ಟಿಸಿ ಕಾಸರಗೋಡು ಡಿಪೋ ವತಿಯಿಂದ ಪ್ರಮುಖ ಧಾರ್ಮಿಕ ಕೇಂದ್ರ ಕೊಟ್ಟಿಯೂರು ದೇಗುಲಕ್ಕೆ ಯಾತ್ರೆಯನ್ನು ಆಯೋಜಿಸುತ್ತಿದೆ. ಜೂನ್ 27 ರಂದು ಬೆಳಿಗ್ಗೆ 5ಕ್ಕೆ ಕಾಸರಗೋಡಿನಿಂದ ಹೊರಟು ರಾತ್ರಿ 8ಕ್ಕೆ ವಾಪಸಾಗುವ ರೀತಿಯಲ್ಲಿ ಪ್ರವಾಸ ಆಯೋಜಿಸಲಾಗಿದೆ. ಕೊಟ್ಟಿಯೂರು ಕ್ಷೇತ್ರದ ಜತೆಗೆ ಮಾಮನಿಕುನ್ನು, ಮೃದಂಗ ಶೈಲೇಶ್ವರಿ ಮತ್ತು ತಳಿ ರಾಜ ರಾಜೇಶ್ವರ ದೇವಸ್ಥಾನಗಳಿಗೂ ಭೇಟಿ ನೀಡಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(8848678173)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

