HEALTH TIPS

ದೆಹಲಿ ಹವಾಮಾನ ಕೇಂದ್ರದ 'ಎಕ್ಸ್' ಖಾತೆ ಹ್ಯಾಕ್‌

ನವದೆಹಲಿ: ಭಾರತೀಯ ಹವಾಮಾನ ಇಲಾಖೆಯ(ಐಎಂಡಿ) ದೆಹಲಿ ಕೇಂದ್ರದ 'ಎಕ್ಸ್‌' ಖಾತೆ ಹ್ಯಾಕ್‌ ಆಗಿರುವುದಾಗಿ ಇಲಾಖೆ ಭಾನುವಾರ ಹೇಳಿದೆ. 

ಖಾತೆಯಲ್ಲಿ ಶನಿವಾರ ಕೆಲವು ಅನುಚಿತ ಪೋಸ್ಟ್‌ಗಳು ಪ್ರಕಟವಾಗಿದ್ದವು. ಈ ಕುರಿತು ಸುದ್ದಿ ಸಂಸ್ಥೆ ಪಿಟಿಐ ಇಲಾಖೆಯ ಗಮನಕ್ಕೆ ತಂದಿತ್ತು.

ಎಕ್ಸ್‌ ಖಾತೆ ಹ್ಯಾಕ್‌ ಆಗಿರುವ ಕುರಿತು ಐಎಂಡಿ ಭಾನುವಾರ ಪ್ರಕಟಣೆ ಹೊರಡಿಸಿದ್ದು, 'ಎಕ್ಸ್‌ ಖಾತೆ ಶನಿವಾರ ಹ್ಯಾಕ್‌ ಆಗಿದ್ದು, ಕೆಲವು ಅನುಚಿತ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಪೋಸ್ಟ್‌ಗಳನ್ನು ಡಿಲೀಟ್‌ ಮಾಡಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಈಗ ಖಾತೆಯನ್ನು ಸರಿಪಡಿಸಲಾಗಿದೆ' ಎಂದು ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries