ಇಡುಕ್ಕಿ/ತೋಡುಪುಳ: ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು (ಎಸ್.ಡಿ.ಆರ್.ಎಫ್.) ತಕ್ಷಣವೇ ರಚಿಸಬೇಕೆಂದು ಸಂಸದ ಡೀನ್ ಕುರಿಯಾಕೋಸ್ ಒತ್ತಾಯಿಸಿದರು. ಗೃಹ ಇಲಾಖೆಯಲ್ಲಿ ಪೋಲೀಸ್ ಪಡೆಯ ಅಡಿಯಲ್ಲಿ ವಿಪತ್ತು ನಿರ್ವಹಣಾ ಪಡೆಗಾಗಿ 100 ಹುದ್ದೆಗಳನ್ನು ಸರ್ಕಾರ ರಚಿಸಿದ್ದರೂ, ಈ ವ್ಯವಸ್ಥೆ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳ ತರಬೇತಿ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಕೈಗೊಂಡಿಲ್ಲ.
ಹೆಚ್ಚುತ್ತಿರುವ ನೈಸರ್ಗಿಕ ವಿಕೋಪಗಳು ಮತ್ತು ಇತರ ಅಪಘಾತಗಳ ಸಂದರ್ಭದಲ್ಲಿ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಅಗ್ನಿಶಾಮಕ ಮತ್ತು ರಕ್ಷಣಾ ಕೇಂದ್ರಗಳ ಸಂಖ್ಯೆ ಕಡಿಮೆ ಇರುವ ಸಂದರ್ಭದಲ್ಲಿ Sಆಖಈ ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದು ಸಂಸದರು ಗಮನಸೆಳೆದರು.
ಹೆಚ್ಚಿನ ರಾಜ್ಯಗಳಲ್ಲಿ ಎಸ್.ಡಿ.ಆರ್.ಎಫ್. ಕಾರ್ಯಾಚರಣೆಗಳು ಈಗಾಗಲೇ ಪ್ರಾರಂಭವಾಗಿವೆ. ಇಡುಕ್ಕಿ ಜಿಲ್ಲೆಗೆ ಅತ್ಯಂತ ಪ್ರಯೋಜನಕಾರಿಯಾದ ಈ ವಿಷಯದಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗೆ ಪತ್ರ ಕಳುಹಿಸಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.


